ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಆಡಳಿತದಡಿಯಲ್ಲಿ ಬರುವ ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ 2024-25ನೇ ಸಾಲಿನ ತರಗತಿಗಳು ಸೆ. 4 ರಂದು ಆರಂಭಗೊಂಡಿತು. ಎ.ಒ.ಎಲ್.ಇ, ಕಮಿಟಿ ‘ಬಿ’ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಉಜ್ವಲ್ ಯು.ಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಆಕಾಡೆಮಿ ಲಿಬರಲ್ ಎಜ್ಯುಕೇಶನ್ ಇದರ ಸ್ಥಾಪಕಾಧ್ಯಕ್ಷರಾದ ಕುರುಂಜಿ ವೆಂಕಟ್ರಮಣ ಗೌಡರು 1986 ರಲ್ಲಿ ಸ್ಥಾಪಿಸಲ್ಪಟ್ಟ ಈ ವಿದ್ಯಾ ಸಂಸ್ಥೆಯು ಕಳೆದ 39 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಕಮಿಟಿ ಬಿ’ ಯ ಚೆಯರ್‌ಮನ್‌ರಾದ ಡಾ| ರೇಣುಕಾಪ್ರಸಾದ್ ಕೆ.ವಿ ಯವರ ಕೆ.ವಿ.ಜಿ ಯವರು ಸ್ಥಾಪಿಸಲ್ಪಟ್ಟ ವಿದ್ಯಾ ಸಂಸ್ಥೆಗೆ ಆಧುನಿಕ ಮೆರುಗನ್ನು ನೀಡಿ ಸುಸಜ್ಜಿತ ಕಾರಾಗಾರ, ತರಗತಿ ಕೊಠಡಿಗಳು, ಉತ್ತಮ ಉಪನ್ಯಾಸಕ ವೃಂದದವರನ್ನು ನೀಡಿ ಇಡೀ ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿ ರೂಪುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇವುಗಳನ್ನು ಸದುಪಯೋಗಪಡಿಸಿಕೊಂಡು ಶಿಸ್ತಿನಿಂದ ತರಬೇತಿ ಪಡೆಯಬೇಕು. ಜೊತೆಗೆ ಗುರುಹಿರಿಯರಿಗೆ ಗೌರವವನ್ನು ಕೊಡಲು ಕಲಿತು ಸುಸಜ್ಜಿತರಾಗಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಾಚಾರ್ಯರಾದ ಚಿದಾನಂದ ಗೌಡ ಬಾಳಿಲ ರವರು ಮಾತನಾಡಿ ನಮ್ಮಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಸ್ವ ಉದ್ಯೋಗವನ್ನು ಮಾಡುವುದಕ್ಕೆ ಬೇಕಾದಷ್ಟು ಅವಕಾಶವಿದೆ.
ವಿದ್ಯಾಭ್ಯಾಸಕ್ಕೆ ಬರುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿದ್ಯಾರ್ಥಿವೇತನ ಸೌಲಭ್ಯ ದೊರಕುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣ ಮುಗಿಸಿದ ತಕ್ಷಣದಲ್ಲಿ 100% ಉದ್ಯೋಗದ ಅವಕಾಶದ ಭರವಸೆಯನ್ನು ನಾವು ಕೊಡುತ್ತೇವೆ ಎಂದು ಹೇಳಿ ಶುಭ ಹಾರೈಸಿದರು.
ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ ತರಬೇತಿ ಅಧಿಕಾರಿಗಳಾದ ದಿನೇಶ್ ಮಡ್ತಿಲರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 39 ವರ್ಷಗಳಿಂದ ವಿದ್ಯಾರ್ಥಿಗಳು ಗಳಿಸಿದ ಉದ್ಯೋಗವನ್ನು ನೆನಪಿಸಿದರು. ವಿದ್ಯಾರ್ಥಿಗಳ ಬಗ್ಗೆ ನಾವೆಷ್ಟು ಗಮನ ಹರಿಸುತ್ತೇವೆಯೋ ಅಷ್ಟೇ ಗಮನವನ್ನು ಹೆತ್ತವರು ಕೂಡ ಗಮನ ಹರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಡ್ರೆಸ್ ಕೋಡ್ ಆಗಲೀ, ಮೊಬೈಲ್ ಬಳಕೆಯಾಗಲೀ, ದ್ವಿಚಕ್ರ ವಾಹನ ಬಳಕೆಯಾಗಲೀ, ನಿಯಮಿತವಾಗಿರಬೇಕು ಎಂಬುದಾಗಿ ಶುಭಹಾರೈಸಿ ಎಲ್ಲರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಎ.ಪಿ.ಎಲ್.ಟಿ. ಇದರ ಕಮಿಟಿ, ‘ಬಿ ‘ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಉಜ್ವಲ್ ಯು.ಜೆ ಪ್ರಾಚಾರ್ಯರಾದ ಚಿದಾನಂದ ಗೌಡ ಬಾಳಿಲ, ಉಪಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಕಛೇರಿ ಆಧೀಕ್ಷಕರಾದ ಭವಾನಿಶಂಕರ ಅಡ್ತಲೆ ಉಪಸ್ಥಿತರಿದ್ದರು. ತರಗತಿ ಆರಂಭೋತ್ಸವದ ಸಂದರ್ಭದಲ್ಲಿ ಕಿರಿಯ ತರಬೇತಿ ಅಧಿಕಾರಿಗಳಾದ ವಲ್ಲೀಶ ಉಪ್ಪರ್ಣ ಡಿ, ವಿಷ್ಣುಮೂರ್ತಿ ಎಂ.ಕೆ. ಶ್ರೀಧರ ಕೆ. ಭಾಸ್ಕರ ಕೆ, ಹೊನ್ನಪ್ಪ ಕೆ. ಗಿರೀಶ ಬಿ.ಕೆ. ಶ್ರೀಮತಿ ಗುಣರತ್ನ,
ಪ್ರವೀಣ ಕುಮಾರ ಕೆ.ಸ್, ಹಾಗೂ ಕಛೇರಿ ಸಿಬ್ಬಂದಿಗಳಾದ ಶ್ರೀಮತಿ ನಳಿನಿ ಕೆ. ಶ್ರೀಮತಿ ಹೇಮಾವತಿ ಕೆ. ಜಗಧೀಶ ಯು. ಸುಧಾಕರ ಎಂ. ಉಪಸ್ಥಿತರಿದ್ದರು. ಶ್ರೀಮತಿ ನಳಿನಿ ಕೆ ರವರು ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭ ಪ್ರವೀಣ ಕುಮಾರ ಕೆ.ಎಸ್. ವಂದನಾರ್ಪನೆಗೈದರು, ಭವಾನಿಶಂಕರ ಅಡಲೆ ಯವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.