ಕೇರಳದ ಬಂದಡ್ಕ ಕಡೆಯಿಂದ ಸುಳ್ಯಕ್ಕೆ ಸಂಚರಿಸುತ್ತಿದ್ದ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಚಲಿಸಿ ನಾಮಫಲಕ್ಕೆ ಡಿಕ್ಕಿ ಹೊಡೆದ ಘಟನೆ ಇದೀಗ ಆಲೆಟ್ಟಿಯ ನಾರ್ಕೋಡು ಜಂಕ್ಷನ್ ಬಳಿ ಸಂಭವಿಸಿದೆ.
ಪರಿಣಾಮವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಲ್ಪ ಸ್ವಲ್ಪ ಗಾಯಗೊಂಡು ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ವಾಗಿ ಜಖಂಗೊಂಡಿದೆ.