ಕೋಲ್ಚಾರು ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ “ಅತ್ಯುತ್ತಮ ಕನ್ನಡ ಶಾಲೆ” ಪ್ರಶಸ್ತಿ ಪ್ರದಾನ

0

ಕರ್ನಾಟಕ ಸರ್ಕಾರದ ವತಿಯಿಂದ 2024-25 ನೇ ಸಾಲಿನಲ್ಲಿ ಮಾಜಿ ಶಿಕ್ಷಣ ಸಚಿವ,ಮಲೆನಾಡ ಗಾಂಧಿ, ದಿ.ಎಚ್.ಜಿ ಗೋವಿಂದೇ ಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ದಿನಾಚರಣೆಯ ದಿನದಂದು ಕೊಡಮಾಡಲ್ಪಡುವ ರಾಜ್ಯ ಮಟ್ಟದ ಅತ್ಯುತ್ತಮ ಕನ್ನಡ ಸರಕಾರಿ ಶಾಲೆ ಪ್ರಶಸ್ತಿಯು ಆಲೆಟ್ಟಿ ಗ್ರಾಮದ ಕೋಲ್ಚಾರು ಸ.ಉ.ಹಿ.ಪ್ರಾಥಮಿಕ ಶಾಲೆಗೆ ಲಭಿಸಿದೆ

ಇಂದು ಬೆಂಗಳೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ರವರ ಉಪಸ್ಥಿತಿಯಲ್ಲಿ ಪ್ರಶಸ್ತಿ ‌ಪ್ರದಾನ ಮಾಡಲಾಯಿತು.


ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರು ಪ್ರಶಸ್ತಿ ನೀಡಿ ಅಭಿನಂದಿಸಿದರು. ಶಾಲೆಯ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ,ಸಹ ಶಿಕ್ಷಕಿ ಜಲಜಾಕ್ಷಿ ಕೆ.ಡಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಪಾಲನಾ ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ,
ನಿವೃತ್ತ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ,
ಸಹ ಶಿಕ್ಷಕಿ ಮಮತಾ ಕೆ ವಿ,ರಂಗನಾಥ ಎಂಎಸ್,ಮನು ಕುಮಾರ್ ಸಿ.ಎಂ, ನೀಲಕಂಠ ಕೊಲ್ಲರಮೂಲೆ, ಐತ್ತಪ್ಪ ನಾಯ್ಕ್, ಪ್ರೇಮಚಂದ್ರ ಡಿ.ಎಸ್,ವಿನುತಾ ಕೋಲ್ಚಾರು, ಜಗದೀಶ್ ಕೂಳಿಯಡ್ಕ, ಶಶಿಧರ ಕುಡೆಂಬಿ,ಚಿದಾನಂದ ಕೋಲ್ಚಾರು,ಹೂವಾನಂದ ಬಾರ್ಪಣೆ,ಹೇಮಾವತಿ ಕೊಯಿಂಗಾಜೆ, ಸೌಮ್ಯ ಕೊಯಿಂಗಾಜೆ,ಚಂದ್ರಶೇಖರ,ಶಾಲಾ ನಾಯಕ ಧ್ಯಾನ್ ಜಿ, ಸಾಂಸ್ಕೃತಿಕ ಮಂತ್ರಿ ಕು.ಸೌಪರ್ಣಿಕಾ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯ ಸಮಿತಿಯಲ್ಲಿ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ಗುಣಮಟ್ಟ, ಪರಿಸರ ಸ್ವಚ್ಛತೆ, ಗ್ರಂಥಾಲಯ, ವಿವಿಧ ಚಟುವಟಿಕೆಗಳ ಆಯೋಜನೆ, ಸಮುದಾಯದ ಸಹಭಾಗಿತ್ವ ಇನ್ನಿತರ ಚಟುವಟಿಕೆಗಳನ್ನು ಪರಿಗಣಿಸಿ ಜಿಲ್ಲೆಯಿಂದ ಅತ್ಯುತ್ತಮ ಶಾಲೆ ಎಂದು ಪರಿಗಣಿಸಲಾಗಿತ್ತು.