ಸುಳ್ಯದ ಸೃಷ್ಠಿ ಪ್ಯಾನ್ಸಿಯಲ್ಲಿ ಲಕ್ಕಿಕೃಷ್ಣ ಅದೃಷ್ಟವಂತರಿಗೆ ಬಹುಮಾನ ವಿತರಣೆ

0

ಸುಳ್ಯದ ಹೆಸರಾಂತ ಮೊಬೈಲ್ ಮಾರಾಟ ಮತ್ತು ಸರ್ವಿಸ್ ಮಳಿಗೆ ಸೃಷ್ಠಿ ಪ್ಯಾನ್ಸಿ & ಮೊಬೈಲ್ ಮಳಿಗೆಯ ವತಿಯಿಂದ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ
ಶ್ರೀ ಕೃಷ್ಣ ವೇಷದಾರಿ ಪುಟಾಣಿ ಮಕ್ಕಳ ಫೋಟೋ ಸ್ಪರ್ಧೆ ನಡೆದಿದ್ದು, 10 ಲಕ್ಕಿಕೃಷ್ಣ ಅದೃಷ್ಟವಂತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸೆ. 6 ರಂದು ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಐವರ್ನಾಡು ಗ್ರಾಮ ಪಂಚಾಯತಿ ಪಿಡಿಒ ಶ್ಯಾಮ್ ಪ್ರಸಾದ್, ಉದ್ಯಮಿ ರಾಗೇಶ್, ಸುದ್ದಿ ಬಿಡುಗಡೆ ಪ್ರಕಾಶಕ ಕುಶಾಂತ್ ಕೊರತ್ಯಡ್ಕ, ವರದಿಗಾರ ಕೆ. ಟಿ. ಭಾಗೇಶ್, ಬಜಾಜ್ ಫೈನಾನ್ಸ್ ನ ಕೌಶಿಕ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮನಸ್ವಿ, ಕವನ, ರಶ್ಮಿ, ಕಿಶನ್ ರವರು ಭಾಗವಹಿಸಿ ಬಹುಮಾನ ವಿತರಿಸಿದರು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ವರದಿಗಾರ ಶರೀಫ್ ಜಟ್ಟಿಪ್ಪಳ್ಳ ಸಹಕರಿಸಿದರು.

ಬಹುಮಾನ ವಿಜೇತರು

ಸುಮಾರು 350 ಕ್ಕಿಂತಲೂ ಹೆಚ್ಚು ಕೃಷ್ಣ ವೇಷದಾರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅದೃಷ್ಟವಂತ 10 ಕೃಷ್ಣವೇಷಧಾರಿಗಳನ್ನು ಲಕ್ಕಿ ಕೂಪನ್ ಮೂಲಕ ಆಯ್ಕೆ ಮಾಡಲಾಗಿದ್ದು, ನೆಲ್ಲೂರು ಕೆಮ್ರಾಜೆ ಗ್ರಾಮದ ಹರ್ಲಡ್ಕ ರವಿಕಿರಣ್ ಮತ್ತು ಶಾಲಿನಿ ದಂಪತಿಗಳ ಪುತ್ರಿ ದೃತಿ, ದುಗಲಡ್ಕದ ವಾಸುದೇವ ಮತ್ತು ದಿವ್ಯ ದಂಪತಿಗಳ ಪುತ್ರ ಕಿನ್ವಿತ್, ಎಡಮಂಗಲದ ಕಲ್ಲರ್ಪೆ ಹರೀಶ್ ಮತ್ತು ವಿಶಾಲ ದಂಪತಿಗಳ ಪುತ್ರ ಯಥಾರ್ತ್, ನಡುಗಲ್ಲಿನ ಕಲ್ಲಾಜೆ ಹರ್ಷ ಅಂಬೆಕಲ್ಲು ಮತ್ತು ಭವ್ಯ ದಂಪತಿಗಳ ಪುತ್ರ ತೋಷಿತ, ಸುಳ್ಯ ಕಸಬಾ ಜಯನಗರ ಕೇಶವ ಮತ್ತು ಕವಿತ ದಂಪತಿಗಳ ಪುತ್ರ ವೃತಿಕ್, ಆಲೆಟ್ಟಿ ಕುಡೆಕಲ್ಲು ರಾಕೇಶ್ ಮತ್ತು ಲವೀನ ದಂಪತಿಗಳ ಪುತ್ರ ರೆಯಾನ್ಸ್, ಆರoತೋಡು ಬಿಳಿಯಾರಿನ ಹರಿಶ್ಚಂದ್ರ ಮತ್ತು ಮಧುಶ್ರೀ ದಂಪತಿಗಳ ಪುತ್ರಿ ಆತ್ಮಿಕ, ಆಲೆಟ್ಟಿಯ ಕಣಕ್ಕೂರು ಸಿಜು ಮತ್ತು ಶೇಷಮ್ಮ ದಂಪತಿಗಳ ಪುತ್ರ ಸಂಜಿತ್, ಮಂಡೆಕೋಲಿನ ಬೊಳುಗಲ್ಲು ಜಯಪ್ರಕಾಶ್ ಮತ್ತು ಜಯಶ್ರೀ ದಂಪತಿಗಳ ಪುತ್ರಿ ಮೋನಿಶ್ಕ, ಮಡಿಕೇರಿಯ ಕೃಷ್ಣ ಮತ್ತು ಶಾಲಿನಿ ದಂಪತಿಗಳ ಪುತ್ರ ವೈಷ್ಣವ್ ಕೃಷ್ಣ ಬಹುಮಾನ ವಿಜೇತರಾಗಿ ಬಹುಮಾನ ಸ್ವೀಕರಿಸಿದರು.

ಮಕ್ಕಳ ಹೆತ್ತವರು, ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.