ಸುಳ್ಯ ಪೊಲೀಸ್ ಠಾಣೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ಕುಡುಕ ವ್ಯಕ್ತಿಯೋರ್ವ ಬಿರುಸಿನ ಮಳೆಯ ನಡುವೆಯೂ ಅವಾಂತರ ಮಾಡಿದ ಘಟನೆ ಇದೀಗ ನಡೆದಿದೆ.
ಎದ್ದು ನಿಲ್ಲಲೂ ಸಾಧ್ಯವಾಗದ ಈತ ರಸ್ತೆಯ ಮಧ್ಯಭಾಗದಲ್ಲಿ ನಿಂತು ಇತರ ವಾಹನಗಳಿಗೆ ಅಡ್ಡಿ ಪಡಿಸಿದ್ದಾನೆ. ಬಿರುಸಿನ ಮಳೆ ಬರುತ್ತಿದ್ದರೂ ಅದನ್ನು ಲೆಕ್ಕಿಸದೆ ಅಮಲೇರಿದ ಈತ ರಸ್ತೆಯಲ್ಲಿ ಮಾಡುತ್ತಿರುವ ಅವಾಂತರದ ದೃಶ್ಯವನ್ನು ಸಾರ್ವಜನಿಕರು ನಿಂತು ನೋಡುತ್ತಿದ್ದರು.