ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನ ವಿಸ್ತೃತ ಸೇವೆಗಳ ಉದ್ಘಾಟನೆ

0

ಡಾ. ಕಿಶನ್ ರಾವ್ ಬಾಳಿಲರವರ ಅಯ್ಯನಕಟ್ಟೆಯಲ್ಲಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನ ವಿಸ್ತೃತ ಸೇವೆಗಳ ಉದ್ಘಾಟನಾ ಸಮಾರಂಭ ಸೆ. 7ರಂದು ನಡೆಯಿತು. ಮಂಗಳೂರಿನಲ್ಲಿ
ತೆರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಜಯರಾಮ ಪಂಜಿಗಾರು ವಿಸ್ತೃತ ಸೇವೆಯನ್ನು ಮತ್ತು ಕಟ್ಟಡವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ಡಾ. ಕಿಶನ್ ರಾವ್ ರವರ ಮಾರ್ಗದರ್ಶಕರಾದ ಕೆಯ್ಯೂರು ಶ್ರೀದೇವಿ ಕ್ಲಿನಿಕ್ ನ ವೈದ್ಯರಾದ ಡಾ. ಶಿವಪ್ರಸಾದ್ ಶೆಟ್ಟಿ ಮತ್ತು ನಿಂತಿಕಲ್ಲು ಸರಯೂ ಕ್ಲಿನಿಕ್ ನ ವೈದ್ಯ ಡಾ. ನವೀನ್ ಶಂಕರ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ. ಕಿಶನ್ ರಾವ್ ರವರ ತಂದೆ ರಾಮಚಂದ್ರ ರಾವ್ ಬಿ, ತಾಯಿ ಶ್ರೀಮತಿ ವೀಣಾ ಬಾಳಿಲ, ಬಾವ ಮುರಳೀಧರ ಎಚ್.ಜಿ, ಪತ್ನಿ ಶ್ರೀಮತಿ ಸೌಮ್ಯಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ಕಿಶನ್ ರಾವ್ ರವರ ಸಹೋದರಿ ಶ್ರೀಮತಿ ಸುಕ್ಷಿತಾ ರಾವ್ ಕಾರ್ಯಕ್ರಮ ನಿರೂಪಿಸಿದರು.

ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಸೆಂಟರ್ ನ ವೈದ್ಯ ಡಾ. ಕಿಶನ್ ರಾವ್ ಗ್ರಾಮೀಣ ಪ್ರದೇಶದ ಜನರಿಗೆ ಸಿಟಿಯಲ್ಲಿ ಸಿಗುವ ವೈದ್ಯಕೀಯ ಸೇವೆಗಳು ಕನಿಷ್ಠ ವೆಚ್ಚದಲ್ಲಿ ಲಭಿಸಬೇಕೆನ್ನುವ ಉದ್ದೇಶದಿಂದ ಅತ್ಯಾಧುನಿಕ ಡಿಜಿಟಲ್ ಎಕ್ಸ್ ರೇ, ಸುಸಜ್ಜಿತ ಪಿಜಿಯೋಥೆರಫಿ ಕ್ಲಿನಿಕ್, ಪ್ರತ್ಯೇಕ ಚಿಕಿತ್ಸಾ ಕೊಠಡಿಗಳು, ಹೋಮ್ ಕೇರ್, ಔಷಧಿಗಳು, ರಕ್ತ ಪರೀಕ್ಷೆ ಮೊದಲಾದ ಸೇವೆಗಳನ್ನು ಇಲ್ಲಿ ಆರಂಭಿಸಲಾಗಿದೆ. ಅಗತ್ಯ ಇದ್ದವರಿಗೆ ಔಷಧವನ್ನು ಮನೆಗೆ ಕಳುಹಿಸಿಕೊಡುವುದು ಮತ್ತು ರೋಗಿಗಳ ಮನೆಗೆ ತೆರಳಿ ಸ್ಯಾಂಪಲ್ ಕಲೆಕ್ಷನ್ ಮಾಡುವ ಕಾರ್ಯಗಳನ್ನು ಮಾಡಲಾಗುವುದು ಎಂದರು. ಶ್ರೀಮತಿ ಸೌಮ್ಯಶ್ರೀ ವಂದಿಸಿದರು.
ನಮ್ಮ ಆರೋಗ್ಯಧಾಮದಲ್ಲಿ ತಜ್ಞ ವೈದ್ಯಕೀಯ ಸಲಹೆ, ವೈಯಕ್ತಿಕ ಸಮಾಲೋಚನೆ, ಡೇ ಕೇರ್ ಚಿಕಿತ್ಸೆ, ತುರ್ತು ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆ, ಶಸ್ತ್ರ ಚಿಕಿತ್ಸಾ ಕೊಠಡಿ, ಕ್ಲಿನಿಕಲ್ ಲ್ಯಾಬೋರೇಟರಿ, ಇಸಿಜಿ, ಔಷಧಿಗಳು, ಪಿಜಿಯೋಥೆರಫಿ, ಅಂಬ್ಯುಲೆನ್ಸ್ ಸೇವೆ, ಅತ್ಯಾಧುನಿಕ ಡಿಜಿಟಲ್ ಎಕ್ಸ್ ರೇ ಮತ್ತು ವಿಶೇಷ ಹೋಮ್ ಕೇರ್ ಸೇವೆಗಳು ಲಭ್ಯವಿದೆ.