ಸಂಭ್ರಮದಿಂದ ಸಾಗಿದ ಶೋಭಾಯಾತ್ರೆ – ಜಲಸ್ತಂಭನ
ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಗೋಳಿಯಡ್ಕ ಮರ್ಕಂಜ ಇದರ ವತಿಯಿಂದ ಗೋಳಿಯಡ್ಕ ಮರ್ಕಂಜದಲ್ಲಿ 8ನೇ ವರ್ಷದ ರ್ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆ ಗಣಪತಿ ವಿಗ್ರಹದ ಆಗಮನವಾಗಿ ಬಳಿಕ ವಿಗ್ರಹ ಪ್ರತಿಷ್ಠಾಪನೆ, ನಂತರ ಗಣಪತಿ ಹವನ, ಬೆಳಗ್ಗಿನ ಪೂಜೆ ನಡೆಯಿತು. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಿತು. ಬಳಿಕ ಗೋಳಿಯಡ್ಕ, ಅಂಗಡಿಮಜಲು, ಬಲ್ನಾಡುಪೇಟೆ, ತೇರ್ಥಮಜಲು ಮಾರ್ಗವಾಗಿ ವಿಜೃಂಭಣೆಯ ಶೋಭಾಯಾತ್ರೆ ನಡೆದು ಕಾಯಿಪಳ್ಳದಲ್ಲಿ ವಿಸರ್ಜನೆ ನಡೆಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಡಿ.ಜೆ. ಹಾಡು, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಆಕರ್ಷಕವಾಗಿತ್ತು.