ಸುಬ್ರಹ್ಮಣ್ಯದಲ್ಲಿ 54 ನೇ ವರ್ಷದ ಗಣೇಶೋತ್ಸವ

0

ಸೆ.7 ರಿಂದ ಸೆ.13 ತನಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಸೆ.13 ರಂದು ಸಪ್ತಾಶ್ವದ ಬೆಳ್ಳಿರಥದಲ್ಲಿ ಶ್ರೀ ಗಣಪತಿ ಶೋಭಾಯಾತ್ರೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ವತಿಯಿಂದ 54 ನೇ ವರ್ಷದ ಗಣೇಶೋತ್ಸವ
ಸೆ.7 ರಿಂದ ಸೆ.13 ತನಕ ನಡೆಯಲಿದೆ.

ಕುಕ್ಕೆ
ಸುಬ್ರಹ್ಮಣ್ಯದ ಉತ್ತರಾಧಿ ಮಠದ ದಲ್ಲಿ ಇಂದು ಮೂರ್ತಿ ಪ್ರತಿಷ್ಠಾಪಣೆ ನಡೆಯಿತು. ಬಳಿಕ
ಶ್ರೀ ಮಹಾಗಣಪತಿಗೆ ರಜತ ಕಿರೀಟ ಹಾಗೂ ಪಾಶಾಂಕುಶ ಸಮರ್ಪಣೆ ನಡೆಯಿತು.

ಇಂದು ಗಣಪತಿ ಪ್ರತಿಷ್ಠಾಪನೆ ಬಳಿಕ 108 ತೆಂಗಿನ ಕಾಯಿ ಗಣಪತಿ ಹವನ ನಡೆಯಿತು. ಅಪರಾಹ್ನ ಸಾಂಸ್ಕೃತಿಕ ಸ್ಪರ್ಧೆ ನಡೆದು. ಸಾಯಂಕಾಲ ಭಜನೆ ರಾತ್ರಿ ಹರಿಕಥಾ ಸತ್ಸಂಗ – ದಾನಶೂರ ಕರ್ಣ ನಡೆದು, ಎಸ್.ಎಸ್.ಪಿ.ಯು ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಜನಪದೀಯ ನೃತ್ಯ ಸಿಂಚನ ಹಾಗೂ ಕೆ.ಎಸ್.ಎಸ್. ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.

ಸೆ.8 ರಂದು ಸಾಯಂಕಾಲ ಭಜನೆ, ಕುಮಾರಸ್ವಾಮಿ ವಿದ್ಯಾಲಯ ವಿದ್ಯಾರ್ಥಿಗಳಿಂದ ಕುಮಾರ ವೈಭವ ನಡೆಯಲಿದೆ. ಬಳಿಕ ಕುದ್ರೋಳಿ ಗಣೇಶ್ ಪ್ರಸ್ತುತ ಪಡಿಸುವ ವಿಸ್ಮಯ ಜಾದೂ ನಡೆಯಲಿದೆ.

ಸೆ.9 ರಂದು ಸಂಜೆ ಭಜನೆ, ನಡೆದು ಕೆ.ಎಸ್ ಸುರೇಖಾ ಬಳಗದಿಂದ ” ಭಕ್ತಿ ಭಾವ ಜನಪದ ಗೀತೆಗಳ ಸಂಗಮ – “ಸ್ವರ ಮಾಧುರ್ಯ” ನಡೆಯಲಿದೆ. ಬಳಿಕ ನೃತ್ಯಾರ್ಪಣಂ ನಡೆಯಲಿದೆ.



ಸೆ. ೧೦ ಸಾಯಂಕಾಲ ಭಜನೆ ಬಳಿಕ ರಾತ್ರಿ ಗಂಟೆ 8 ರಿಂದ
ಶಾರದಾ ಆರ್ಟ್ಸ್ ತಂಡ ಐಸಿರಿ ಕಲಾವಿದರು ಮಂಜೇಶ್ವರ ಅವರ ಸಾಮಾಜಿಕ ನಾಟಕ… ಕಲ್ಜಿಗದ ಮಾಯ್ಕರೆ ಪಂಜುರ್ಲಿ ನಡೆಯಲಿದೆ. ಸೆ. 11 ಕ್ಕೆ
ಸಾಯಂಕಾಲ ಭಜನೆ ರಾತ್ರಿ ಗಂಟೆ 8 ರಿಂದ
ಭಕ್ತಿ ಪ್ರಧಾನ ನಾಟಕ ” ಶಿವ ದೂತೆ ಗುಳಿಗೆ” ನಡೆಯಲಿದೆ.


ಸೆ. 12 ರ
ಅಪರಾಹ್ನ ಗಂಟೆ: 1.30 ರಿಂದ
ಭಕ್ತಿ-ಭಾವ ಗಾಯನ ನಡೆಯಲಿದೆ.
ಸಂಜೆ ಗಂಟೆ 4 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.






ರಾತ್ರಿ ಗಂಟೆ 7 ರಿಂದ
ದಿನೇಶ್ ಶೆಟ್ಟಿಗಾರ್ ಕೋಡಪದವು ಸಾರಥ್ಯದಲ್ಲಿ
ಯಕ್ಷ ತೆಲಿಕೆ “ತೆಲಿಕೆದ..ಬರ್ಸ..” ನಡೆಯಲಿದೆ. ರಾತ್ರಿ ಗಂಟೆ 9.30 ರಿಂದ ಅಶೋಕ್ ಶೆಟ್ಟಿ ಸಂಯೋಜನೆಯಲ್ಲಿ ಕನ್ನಡ ಯಕ್ಷಗಾನ ಬಯಲಾಟ
ಶ್ರೀರಾಮ ದರ್ಶನ ( ಗರುಡ ಗರ್ವಭಂಗ ) ನಡೆಯಲಿದೆ. ಸೆ. 13 ರ ಬೆಳಗ್ಗೆ ಗಂಟೆ 9 ರಿಂದ
ಯಜ್ಞೇಶ್ ಆಚಾರ್ಯ ಬಳಗದಿಂದ ಭಕ್ತಿ ಸಂಗೀತ ನಡೆಯಲಿದೆ. ಅಪರಾಹ್ನ ಗಂಟೆ 12.30 ಕ್ಕೆ ಮಹಾಮಂಗಳಾರತಿ ನಡೆದು ಅಪರಾಹ್ನ 1 ರಿಂದ
ಸಪ್ತಾಶ್ವದ ಬೆಳ್ಳಿರಥದಲ್ಲಿ .ಶ್ರೀ ಗಣಪತಿ ಶೋಭಾಯಾತ್ರೆ ನಡೆಯಲಿದೆ.