ವಿಜೃಂಭಣೆಯಿಂದ ನಡೆದ ದುಗ್ಗಲಡ್ಕ 24ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ದುಗ್ಗಲಡ್ಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 24ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಸೆ.7ರಂದು ನಡೆಯಿತು.

ಬೆಳಿಗ್ಗೆ ಧ್ವಜಾರೋಹಣ, ಸ್ಥಳ ಶುದ್ಧಿ, ಗಣಪತಿ ಪ್ರತಿಷ್ಠೆ, ಗಣಪತಿ ಹವನ, ಮಕ್ಕಳಿಗೆ ಅಕ್ಷರಾಭ್ಯಾಸ ಬಳಿಕ ಭಜನಾ ಕಾರ್ಯಕ್ರಮ ನಡೆದು ಅಂಗನವಾಡಿ ಪುಟಾಣಿಗಳಿಂದ ಮತ್ತು ವಿದ್ಯಾರ್ಥಿಗಳಿಂದ ನೃತ್ಯ ವೈಭವ ಬಳಿಕ ವೀಕ್ಷಿತ್ ಕುತ್ಯಾಳ ಬಳಗದವರಿಂದ ಕೊಳಲು ವಾದನ ನಡೆಯಿತು.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಮಧ್ಯಾಹ್ನ ನಂತರ ಅಭಿನವ ಡ್ಯಾನ್ಸ್ ಅಕಾಡೆಮಿ ಪೆರ್ನೆ ಸಾದರಪಡಿಸುವ ನಾಟ್ಯ ಗಣ ವೈಭವ ವಿಶೇಷ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು. ಸಂಜೆ ವಿಶೇಷ ಡಿಜೆ ಆಕರ್ಷಣೆಯೊಂದಿಗೆ ಗಣಪತಿ ವಿಗ್ರಹದ ಶೋಭಾಯಾತ್ರೆ ನಡೆದು ಕಂದಡ್ಕ ಹೊಳೆಯಲ್ಲಿ ಜಲಸ್ಥಂಭನಗೊಂಡಿತು.

ಧಾರ್ಮಿಕ ಸಭಾ ಕಾರ್ಯಕ್ರಮ;
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ತುಂಬೆ ಬಿ.ಎ‌.ಕೈಗಾರಿಕಾ ತರಬೇತು ಸಂಸ್ಥೆಯ ಪ್ರಾಂಶುಪಾಲರಾದ ನವೀನ್ ಕುಮಾರ್ ಕೆ.ಎಸ್.ಧಾರ್ಮಿಕ ಉಪನ್ಯಾಸ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕುದ್ಪಾಜೆ ವಹಿಸಿದ್ದರು. ಅಯ್ಯಪ್ಪ ಭಜನಾ ಮಂದಿರ ಸಮಿತಿ ಅಧ್ಯಕ್ಷ ದಯಾನಂದ ಸಾಲಿಯಾನ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ, ದುಗ್ಗಲಾಯ ದೈವಸ್ಥಾನ ಸಮಿತಿ ಗೌರವಾಧ್ಯಕ್ಷ ಸುಂದರ ರಾವ್, ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಭಾಜಪ ದುಗ್ಗಲಡ್ಕ ವಾರ್ಡ್ ಅಧ್ಯಕ್ಷ ದಿನೇಶ್ ಡಿ.ಕೆ.,ದುಗ್ಗಲಾಯ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ರೈ, ನಗರ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ,ದೊಡ್ಡತೋಟ ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷ ಮಹೇಶ್ ಮೇರ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.ನ.ಪಂ.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ ನೀರಬಿದಿರೆಯವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಪೃಥ್ವಿ ಡಿ.ಪ್ರಾರ್ಥಿಸಿದರು. ದುಗ್ಗಲಾಯ ದೈವಸ್ಥಾನ ಸಮಿತಿ ಕಾರ್ಯದರ್ಶಿ ಶೇಖರ್ ಕುದ್ಪಾಜೆ ಸ್ವಾಗತಿಸಿ, ಕಾವ್ಯ ಡಿ.ಕೆ.ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು. ಜಗಜೀವನ ರಾವ್ ರೆಂಜಾಳ ವೈದಿಕ ಕಾರ್ಯ ನಿರ್ವಹಿಸಿದರು.