ಸುಳ್ಯ ತಾಲೂಕಿನಲ್ಲಿ 4 ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ 18 ರಿಂದ 45 ವರ್ಷ ವಯೋಮಿತಿಯ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣರಾದ ವಿಕಲಚೇತನರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಕಲ್ಮಡ್ಕ, ಕಳಂಜ, ಆಲೆಟ್ಟಿ ಮತ್ತು ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19.09.2024 ರಂದು ಸಾಯಂಕಾಲ 5-30 ಆಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ತಾಲೂಕು ಪಂಚಾಯತ್ ಸುಳ್ಯ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ .ಮೊ. ಸಂಖ್ಯೆ : 8105300057
ಲಗತ್ತಿಸಬೇಕಾದ ದಾಖಲೆಗಳು:-
- ವಿದ್ಯಾರ್ಹತೆಯ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ
- ವಿಕಲಚೇತನರ ಗುರುತಿನ ಚೀಟಿ ಪ್ರತಿ (UDID Number)
- ವಾಸ್ತವ್ಯ ಪ್ರಮಾಣ ಪತ್ರ
- ಆಧಾರ್ ಪ್ರತಿ