ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕುಮಾರಧಾರ ಸ್ನಾನ ಘಟ್ಟದಲ್ಲಿ ನದಿಗಿಳಿಯದೆ ತೀರ್ಥ ಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಕುಮಾರಧಾರ ನದಿಯಲ್ಲಿ ನೀರು ರಭಸವಾಗಿ ಹರಿಯುವ ಕಾರಣ ನದಿ ನೀರಿನಲ್ಲಿ ಇಳಿದು ಮುಳುಗಿ ಸ್ನಾನ ಮಾಡುವುದನ್ನು ಸರ್ಕಾರ ನಿರ್ಬಂಧಿಸಿದೆ.
ಮಳೆಗಾಲ ಸಂದರ್ಭದಲ್ಲಿ, ಪ್ರಕೃತಿ ವಿಕೋಪದ ಕಾರಣದಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ಭಕ್ತರು ಕುಮಾರಧಾರ ನದಿಯಲ್ಲಿ ಇಳಿದು ತೀರ್ಥ ಸ್ನಾನ ಮಾಡಬಾರದು ಎಂದು ಈ ಹಿಂದೆ ಆದೇಶ ಮಾಡಿದ್ದರು.
ತಾತ್ಕಾಲಿಕವಾಗಿ ಡ್ರಮ್ ಗಳಲ್ಲಿ ಕುಮಾರಧಾರ ನೀರನ್ನು ತುಂಬಿ ಅದರಲ್ಲಿ ಸ್ನಾನ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಇನ್ನಷ್ಟು ಭಕ್ತರಿಗೆ ಅನುಕೂಲಕೊಸ್ಕರ ಮಹಿಳೆಯರಿಗೆ ಬೇರೆ ಪುರುಷರಿಗೆ ಬೇರೆ ಶವರ್ ವ್ಯವಸ್ಥೆಯನ್ನು ದೇವಾಲಯ ವತಿಯಿಂದ ಜಾರಿಗೊಳಿಸಲಾಗಿದೆ.