ಗುತ್ತಿಗಾರು ಗ್ರಾಮ ಪಂಚಾಯತ್, ಅಮರ ಸಂಜೀವಿನಿ ಒಕ್ಕೂಟ ಮತ್ತು ದೇವಚಳ್ಳ ಗ್ರಾಮ ಪಂಚಾಯತ್, ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ಜಂಟಿ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನ ಆವರಣದಲ್ಲಿ ಮಹಿಳೆಯರು ತಯಾರಿಸಿದ ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಸೆ.7 ರಂದು ನಡೆಯಿತು .
ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ಉದ್ಘಾಟಿಸಿದರು. ಗ್ರಾ ಪಂ. ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ ಮಾರಾಟಕ್ಕೆ ಚಾಲನೆ ನೀಡಿದರು.
ಇಲ್ಲಿ 15 ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಹೊಮ್ ಪ್ರಾಡಕ್ಟ್ ಗಳಾದ ಹಪ್ಪಳ, ಉಪ್ಪಿನಕಾಯಿ, ಗಡಿ ಮದ್ದು , ಬೆಂಡು ಕುಕ್ಕೆ, ಬುಟ್ಟಿ, ಮುಟ್ಟಾಳೆ, ವೀಳ್ಯ ಎಲೆ , ಬೇಕರಿ ತಿಂಡಿ, ಕ್ಯಾಂಡಲ್, ಚಾಪೆ, ಕ್ರಾಪ್ಟ್ ಐಟಂ, ತರಕಾರಿ, ದೀಪ ಬತ್ತಿ, ಜೇನು ತುಪ್ಪ, ಅಕ್ಕಿ ರೊಟ್ಟಿ, ಚಾಪೆ, ಗೆರಟೆ ಸೌಟು ಇನ್ನಿತರ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು. ಒಕ್ಕೂಟ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಕುಳ್ಳಂಪಾಡಿ , ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಎನ್ ಆರ್ ಎಲ್ ಎಂ ಶ್ರೀಮತಿ ಶ್ವೇತ ರಾಜೇಶ್ ಬಟ್ಟಕಜೆ, ತಾಲೂಕು BRP EP ಶ್ರೀಮತಿ ಜಯಲಕ್ಷ್ಮೀ ಗುತ್ತಿಗಾರು, ಗ್ರಾಮ ಪಂಚಾಯತ್ ಒಕ್ಕೂಟ ಎಂ.ಬಿ.ಕೆ ಶ್ರೀಮತಿ ಮಿತ್ರಕುಮಾರಿ, ಎಲ್.ಸಿ.ಆರ್.ಪಿ ಶಾರದಾ, ಕೃಷಿ ಸಖಿ ಶ್ರೀಮತಿ ಸುಪ್ರೀತಾ, ಪಶು ಸಖಿ ಚೈತನ್ಯ, ದೇವಚಳ್ಳ ಗ್ರಾಮ ಪಂಚಾಯತ್ ಒಕ್ಕೂಟ ಎಂ.ಬಿ.ಕೆ ಭಾರತಿ, ಎಲ್.ಸಿ ಆರ್.ಪಿ ಪ್ರೇಮ, ಪಶು ಸಖಿ ಭಾರತಿ,ಎಲ್ಲ ಒಕ್ಕೂಟ ದ ಸದಸ್ಯರು,ಹರಿಹರ ಒಕ್ಕೂಟ ದ ಕೃಷಿ ಸಖಿ,ಪಶು ಸಖಿ ಉಬರಡ್ಕ ಒಕ್ಕೂಟ ದ ಕೃಷಿ ಸಖಿ,ಸಂಪಾಜೆ ಒಕ್ಕೂಟ ದ ಕೃಷಿ ಸಖಿ ಹಾಜರಿದ್ದರು.