ಸುಂದರ ಮುಗೇರ ಕಲ್ಮಲೆ ಆತ್ಮಹತ್ಯೆ

0

ಕಳಂಜ ಗ್ರಾಮದ ಕಲ್ಮಲೆ ನಿವಾಸಿ ದಿ. ಕರಿಯ ಮುಗೇರ ಮತ್ತು ದಿ. ಮಾಣಿಕ ದಂಪತಿಯ ಪುತ್ರ ಸುಂದರ ಮುಗೇರ ಇಂದು (ಸೆ. 10) ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಇವರಿಗೆ 53 ವರ್ಷ ವಯಸ್ಸಾಗಿತ್ತು. ಸಹೋದರ ಮಾಧವ ಎಂಬವರು ಕೆಲಸಕ್ಕೆ ಹೋಗಿದ್ದು ಸುಂದರ ಒಬ್ಬರೇ ಮನೆಯಲ್ಲಿದ್ದರೆನ್ನಲಾಗಿದೆ. ಇವರ ಪತ್ನಿ ಮತ್ತು ಮಕ್ಕಳು ತವರು ಮನೆಯಲ್ಲಿರುವುದಾಗಿ ತಿಳಿದುಬಂದಿದೆ. ಮೃತರು ಸಹೋದರ ಮಾಧವ, ಪತ್ನಿ ಶ್ರೀಮತಿ ವೇದಾವತಿ, ಪುತ್ರ ದೀಕ್ಷಿತ್, ಪುತ್ರಿ ದೀಕ್ಷಿತಾ, ಸಹೋದರಿಯರಾದ ಶ್ರೀಮತಿ ಜಯಂತಿ, ಭಾಗೀರಥಿ, ಸೀತ, ಮೋಹಿನಿ, ಲಲಿತ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.