ಪಂಜ: ವನಿತಾ ಸಮಾಜದ ವಾರ್ಷಿಕ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷೆ: ಶ್ರೀಮತಿ ಸುಮ ಕುದ್ವ, ಕಾರ್ಯದರ್ಶಿ: ಶ್ರೀಮತಿ ಸ್ವರ್ಣ ರೋಹಿತ್, ಖಜಾಂಚಿ: ಶ್ರೀಮತಿ ಭವ್ಯ ಕುದ್ವ,

ವನಿತಾ ಸಮಾಜ (ರಿ)ಪಂಜ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ತಾಲ್ಲೂಕು ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಡಿ ಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಪವಿತ್ರ ಕುದ್ವ , ಖಜಾಂಚಿ ಶ್ರೀಮತಿ ಸುಮ ಕುದ್ವ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮೀನಾಕ್ಷಿ ಪರೆಮಜಲು ಪ್ರಾರ್ಥಿಸಿದರು. ಶ್ರೀಮತಿ ಭವ್ಯ ಕುದ್ವ ವೇದಿಕೆಗೆ ಆಹ್ವಾನಿಸಿದರು .ಶ್ರೀಮತಿ ಮಾಲಿನಿ ಕುದ್ವ ವಾರ್ಷಿಕ ವರದಿ ವಾಚಿಸಿದರು. ಶ್ರೀಮತಿ ಸುಮ ಕುದ್ವ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಶ್ರೀಮತಿ ಪವಿತ್ರ ಕುದ್ವ ವಂದಿಸಿದರು.
ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಿಗೆ ನಿರ್ಗಮನ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು. ಸಭೆಯಲ್ಲಿ ಪೂರ್ವಾಧ್ಯಕ್ಷರುಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಶ್ರೀಮತಿ ಸುಮ ಕುದ್ವ ,
ಕಾರ್ಯದರ್ಶಿಯಾಗಿ ಶ್ರೀಮತಿ ಸ್ವರ್ಣ ರೋಹಿತ್, ಖಜಾಂಚಿಯಾಗಿ ಶ್ರೀಮತಿ ಭವ್ಯ ಕುದ್ವ, ಉಪಾಧ್ಯಕ್ಷೆಯಾಗಿ ಶ್ರೀಮತಿ ಚಿತ್ರಕಲಾ ಮಾಧವ , ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ವನಿತಾ ಪಟ್ಟಾಜೆ ,ನಿರ್ದೇಶಕರಾಗಿ ಶ್ರೀಮತಿ ಆಶಾ ಮನು, ಶ್ರೀಮತಿ ಸುಜಾತಾ ದಾಮೋದರ, ಶ್ರೀಮತಿ ಪುಷ್ಪ ನೆಲ್ಲಿಕಟ್ಟೆ, ಶ್ರೀಮತಿ ಕಮಲಾ ಬಿಡಾರಕಟ್ಟೆ ಆಯ್ಕೆಯಾದರು.