ಸುಳ್ಯ ಗಣೇಶೋತ್ಸವ:ಗಣೇಶನ ವೈಭವದ ಶೋಭಾಯಾತ್ರೆ ಆರಂಭ

0

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 56 ನೇ ವರ್ಷದ ಗಣೇಶೋತ್ಸವ ದ ಅಂಗವಾಗಿ ಇಂದು ಬೆಳಗ್ಗೆ 108 ತೆಂಗಿನಕಾಯಿಯ ಗಣಪತಿ ಹವನ ನಡೆಯಿತು.


ಅಪರಾಹ್ನ ಅಲಂಕೃತ ಮಂಟಪದಲ್ಲಿ ವಿಶೇಷ ಚೆಂಡೆ ವಾದನಗಳೊಂದಿಗೆ ಆಕರ್ಷಕ ಕುಣಿತ ಭಜನೆಯೊಂದಿಗೆ ಸುಳ್ಯದ ಪ್ರಮುಖ ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆ ಯು ಆರಂಭಗೊಂಡಿತು. ಆಕರ್ಷಕ ಕುಣಿತ ಭಜನೆ, ಗೊಂಬೆ ಬಳಗ, ವಾದ್ಯ ಘೋಷ ಮೆರವಣಿಗೆಯಲ್ಲಿ ಮೆರುಗು ನೀಡಿತು.