ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿಓಣಂ ಆಚರಣೆ

0

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆಯನ್ನುಸೆ.12 ರಂದು ಪೂಕಳಂ (ಹೂವಿನ ರಂಗೋಲಿ) ಚಿತ್ತಾರ ಹಾಗೂ ಮಹಾಬಲಿ ಚಕ್ರವರ್ತಿಯ ವೇಷಧಾರಿಯ ಪ್ರವೇಶದೊಂದಿಗೆ ಆಚರಿಸಲಾಯಿತು.

ಮುಖ್ಯ ಅತಿಥಿಗಳ ನೆಲೆಯಲ್ಲಿ ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್‌ಯು.ಜೆ.ರವರು ಓಣಂ ಹಬ್ಬವು ಸಂಸ್ಕೃತಿಯ ಬೆಸುಗೆಯೊಂದಿಗೆ ಮನಸ್ಸುಗಳನ್ನು ಒಗ್ಗೂಡಿಸಿ ಸಂಭ್ರಮಿಸುವ ಸಂದರ್ಭವನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ಓಣಂ ಕೇರಳದ ಅತ್ಯಂತ ಮಹತ್ವದ ಹಬ್ಬವಾಗಿದೆ. ಇದು ರಾಜ ಮಾಹಬಲಿಯ ವಾರ್ಷಿಕ ಗೃಹ ಪ್ರವೇಶದ ಸಂಕೇತವಾಗಿದೆ, ಅವರ ಆಡಳಿತವು ರಾಜ್ಯಕ್ಕೆ ಅತ್ಯಂತ ಸಂಮೃದ್ಧ ಸಮಯ ಎಂದು ಹೇಳಿ ನೆರೆದ ಎಲ್ಲರಿಗೂ ಸಂತೋಷ ಮತ್ತು ಆನಂದ ತುಂಬಿದ ಓಣಂ ಹಬ್ಬದ ಶುಭಾಶಯವನ್ನು ಹಾರೈಸಿದರು.

ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಅವರು ಓಣಂ ಹಬ್ಬದ ಸೃಷ್ಟಿಯ ಬಗ್ಗೆ ಮಾತನಾಡಿ ಇದು ಸಂತೋಷ ಮತ್ತು ಸಂಮೃದ್ಧಿಯಿಂದ ತುಂಬಿದ ಓಣಂ ಆಗಿರಲಿ. ಈ ಋತುವಿನಲ್ಲಿ ಸಾಕಷ್ಟು ಅದೃಷ್ಟ ಮನಸ್ಸಿನ ಶಾಂತಿ ಸಂತೋಷ ನಿಮ್ಮದಾಗಲಿ ಎಂದು ಹಾರೈಸಿದರು.

ತದನಂತರ ಎಂ.ಬಿ.ಎ. ವಿದ್ಯಾರ್ಥಿಗಳು ಓಣಂ ಹಾಡು ಹಾಗೂ ನೃತ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಎಂ.ಬಿ.ಎ. ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣಾನಂದ ಕೆ.ಎಸ್., ಎಂ.ಬಿ.ಎ. ಡೈರೆಕ್ಟರ್ ಡಾ. ಸುನಿಲ್ ಕುಮಾರ್ ಎಂ., ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ಪ್ರಾಧ್ಯಾಪಕರುಗಳು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.