ನಾಗಮಂಗಲದಲ್ಲಿ ನಡೆದ ಘಟನೆಯನ್ನು ಖಂಡಿಸಿದ ಹಿಂದೂ ಮುಖಂಡರು
ದೇಶವನ್ನು ತುಂಡರಿಸಿ ಇಸ್ಲಾಮೀಕರಣಕ್ಕೆ ಮುಂದಾಗಿದೆ ಕಾಂಗ್ರೆಸ್ ಸರಕಾರ: ವಿನಯ್ ಕಂದಡ್ಕ
ಹಿಂದೂಗಳ ಮೇಲೆ ಹಿಂದೂಗಳ ಆಸ್ತಿಗಳ ಮೇಲೆ ಹಿಂದೂಗಳ ಪವಿತ್ರ ಮೂರ್ತಿ ಗಣೇಶನ ಮೇಲೆ ಚಪ್ಪಲಿ ತೂರಾಟ ನಡೆದರೆ ಕಾಂಗ್ರೆಸ್ ಸರಕಾರದ ದೃಷ್ಟಿಯಲ್ಲಿ ಇದೊಂದು ಸಣ್ಣ ವಿಚಾರ. ಉಡುಪಿಯ ಶಾಲೆಗೆ ಹಿಜಾಬ್ ತೆಗೆದು ಬರುವಂತೆ ಸೂಚಿಸಿದರೆ ಅದು ದೊಡ್ಡ ವಿಷಯವೆಂವಂತೆ ಬಿಂಬಿಸುತ್ತಾರೆ. 1947 ರಲ್ಲಿ ಹಿಂದೂ ದೇಶವನ್ನು ಎರಡು ತುಂಡುಗಳನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಈಗ ಮತ್ತೆ ದೇಶವನ್ನು ತುಂಡು ಮಾಡುವ ಮಾತ್ರವಲ್ಲದೆ ಇಸ್ಲಾಮೀಕರಣ ಮಾಡುವ ಪ್ರಯತ್ನವನ್ನು ಮತ್ತದೆ ಕಾಂಗ್ರೆಸ್ ಸರಕಾರ ಮಾಡಲು ಮುಂದಾಗಿದೆ. ಕೆಲವು ಕಾಂಗ್ರೆಸಿಗರು ಅಧಿಕಾರದ ವ್ಯಾಮೋಹದಿಂದ ತಮ್ಮ ಸಂಸಾರದ ಮೇಲೆ ಅನ್ಯಾಯವಾಗಿದ್ದರೂ ಬಾಯಿ ಬಿಚ್ಚುತ್ತಿಲ್ಲ.ಪೊಲೀಸ್ ಠಾಣೆಯ ಒಳ ನುಗ್ಗಿ ಹಲ್ಲೆ ಮಾಡಿದರು ಪೊಲೀಸರು ಅವರ ಮೇಲೆ ತಿರುಗಿ ಹೊಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದ್ಸಾರೆ.ಕಾಂಗ್ರೆಸ್ ಸರ್ಕಾರ ಇರುವ ತನಕ ಹಿಂದೂಗಳಿಗೆ ರಕ್ಷಣೆ ಇಲ್ಲ.ಇದೇ ರೀತಿಯ ದಬ್ಬಾಳಿಕೆ ನಡೆದರೆ ಮುಂದಿನ ದಿನಗಳು ಸಂಘರ್ಷದ ದಿನಗಳು ಬರಲಿದೆ. ಹಿಂದೂಗಳು ತಮ್ಮ ರಕ್ಷಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಪೊಲೀಸ್ ಇಲಾಖೆ ಇಂತಹ ಗಂಭೀರ ವಿಷಯದ ಬಗ್ಗೆ ದಾಖಲಿಸಿಕೊಳ್ಳಿ.ಹಿಂದೂಗಳು ತಮ್ಮ ಆತ್ಮ ರಕ್ಷಣೆಗೋಸ್ಕರ ಶಶ್ರ್ತಾಸ್ತ್ರ ಗಳನ್ನು ಹಿಡಿದುಕೊಂಡು ಸಿದ್ದರಾಗಬೇಕಾದ ಅನಿವಾರ್ಯತೆ ಬರಲು ಸಾಧ್ಯವಿದೆ. ನಾಗಮಂಗಲ ಪೋಲೀಸ್ ಠಾಣೆಯ ಎದುರುಗಡೆ ಮಹಿಳೆಯರು ಗುಂಪು ಕಟ್ಟಿಕೊಂಡು ನಮ್ಮ ಮಕ್ಕಳು ಅಮಾಯಕರು ಎಂಬ ನಾಟಕದ ಪ್ರತಿಭಟನೆ ಮಾಡುತ್ತಿದ್ದಾರೆ.ಹಿಂದೂ ಧರ್ಮದ ಪವಿತ್ರ ದೇವರ ಮೆರವಣಿಗೆಯ ಮೇಲೆ ಚಪ್ಪಲಿ,ಕಲ್ಲು ತೂರಾಟ ಮಾಡಿದವರು ಅಮಾಯಕರಾ ? ಪೆಟ್ರೋಲ್ ಬಾಂಬ್ ಸಿಡಿಸಿ ಅಮಾಯಕರನ್ನು ಮುಗಿಸಲು ಹೊರಟವರು ಅಮಾಯಕರಾ ? ಹಿಂದೂ ಅಂಗಡಿಗಳನ್ನು ಹುಡುಕಿ ಬೆಂಕಿಕೊಟ್ಟವರು ಅಮಾಯಕರೇ..? ಎಂದು ನ. ಪಂ. ಮಾಜಿ ಅಧ್ಯಕ್ಷ ವಿನಯ್ ಕುಮಾರ್ ರವರು ಪ್ರಶ್ನಿಸಿದರು.
ನಾಗಮಂಗಲದಲ್ಲಿ ಗಣೇಶನ ಶೋಭಾಯಾತ್ರೆ ಯ ವೇಳೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಕಲ್ಲು ಚಪ್ಪಲಿ ತೂರಾಟ ಮಾಡಿ ಗಲಭೆ ಸೃಷ್ಟಿಸಿದ ದೇಶ ದ್ರೋಹಿ ಕೃತ್ಯದ ವಿರುದ್ಧ ಖಂಡಿಸಿ ಹಿಂದೂ ಸಂಘಟನೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಊರಿನಲ್ಲಿ ಅಮಾಯಕರ ಸೋಗಿನಲ್ಲಿ ಬಂದು ಗಲಭೆ ಮತ್ತು ಬಾಂಬ್ ಸ್ಪೋಟ ಮಾಡುವ ಹುನ್ನಾರ ನಡೆಯುವ ಸಾಧ್ಯತೆ ಇರುವುದರಿಂದಪ್ರತೀ ಹಳ್ಳಿ ಹಳ್ಳಿಗಳಲ್ಲಿಯೂ ಹಿಂದೂಗಳು ಎಚ್ಚರವಹಿಸಿ ಅನಿವಾರ್ಯವಾದರೆ ಆತ್ಮ ರಕ್ಷಣೆ ದೃಷ್ಟಿಯಿಂದ ಶಸ್ತ್ರಾಸ್ತ್ರ ಹಿಡಿಯಲು ಬದ್ದರಾಗಬೇಕಾಗಿದೆ ಎಂದು ಕರೆ ನೀಡಿದರು.
ಸ್ವಾತಂತ್ರ್ಯ ಕಾಲದಲ್ಲಿಭಾರತ ದೇಶ ಹಿಂದೂಗಳಿಗೆ ಮಾತ್ರ ಮುಸಲ್ಮಾನ ಸಮುದಾಯಕ್ಕೆ ಪ್ರತ್ಯೇಕವೆಂಬಂತೆ ವಿಭಜನೆಗೊಂಡ ದೇಶ. ಬಹುಸಂಖ್ಯಾತರಾಗಿರುವ ಹಿಂದೂ ರಾಷ್ಟ್ರದಲ್ಲಿ ಈ ರೀತಿಯ ದೌರ್ಜನ್ಯ ವೆಸಗಿದರೆ ಬಾಂಗ್ಲಾದೇಶ ದಲ್ಲಿ ಹಿಂದೂಗಳು ಎಷ್ಟು ಹಿಂಸೆ ನೋವು ನರಕ ಯಾತನೆ ಅನುಭವಿಸಿರವಹುದು.ದೇಶದ ಪ್ರಧಾನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಮತ್ತು ಚಿತ್ರಗಳನ್ನು ಹಾಕುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಕಪಿ ಮುಷ್ಠಿಯಲ್ಲಿರುವ ಪೋಲಿಸ್ ಇಲಾಖೆ ಎಲ್ಲಾ ಅನ್ಯಾಯಗಳನ್ನು ನೋಡಿಯೂ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದೇ ರೀತಿಯ ವ್ಯವಸ್ಥೆಯಿಂದಾಗಿ ಭಾರತ ಇಸ್ಲಾಮೀಕರಣವಾಗುವ ಸಾಧ್ಯತೆ ಇದೆ. ಭಾರತ ದೇಶದ ಉಳಿವಿಗೆ ಹಿಂದೂಗಳು ಒಗ್ಗಟ್ಟಿನಿಂದ ಎಚ್ಚರಿಕೆಯಿಂದ ಇರಬೇಕು.ಕಾಂಗ್ರೆಸ್ ಸರಕಾರ ಇರುವ ತನಕ ರಾಜ್ಯದಲ್ಲಿ ಸಂಘರ್ಷ ಗಲಭೆಗಳು ನಡೆಯುತ್ತಲೇ ಇರುತ್ತದೆ ಎಂದು ಸುಭೋದ್ ಶೆಟ್ಟಿ ಮೇನಾಲ ರವರು ಹೇಳಿದರು.
ಕಾಂಗ್ರೆಸ್ ಸರಕಾರದ ಪ್ರಚೋದನೆಯಿಂದಲೇ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕೆಲಸವಾಗುತ್ತಿದೆ. ಗೃಹ ಮಂತ್ರಿಗಳಿಗೆ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಸಣ್ಣ ವಿಚಾರವೆಂಬಂತೆ ವರ್ತಿಸುತ್ತಿದ್ದಾರೆ. ಗಣೇಶ ದೇವರ ತಂದೆ ಪರಮೇಶ್ವರನ ಹೆಸರನ್ನಿಟ್ಟುಕೊಳ್ಳುವ ಯೋಗ್ಯತೆ ಇಲ್ಲದ ಗೃಹ ಸಚಿವರು ಎಂದು ಶಿವಾನಂದ ಕುಕ್ಕುಂಬಳ ಕಿಡಿ ಕಾರಿದರು.
ಕಿಡಿಗೇಡಿಗೇಡಿಗಳ ಪುಂಡ ಪೋಕರಿಗಳ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಬೆಂಬಲಿಸುತ್ತಿದೆ.ಪೋಲಿಸ್ ಇಲಾಖೆ ತಾರತಮ್ಯ ಭಾವನೆಯಿಂದ ವರ್ತಿಸುತ್ತಿದೆ. ಸರಕಾರದ ಕೈಗೊಂಬೆಯಂತೆ ನಡೆಯತ್ತಿದ್ದು ಹಿಂದೂಗಳ ಮೇಲೆ ಏನೇ ಅನ್ಯಾಯವಾದರೂ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳದೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸೋಮಶೇಖರ ಪೈಕ ಆರೋಪಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಯ ಮುಖಂಡರಾದ ಪಿ.ಕೆ.ಉಮೇಶ್, ವಿಕ್ರಮ್ ಅಡ್ಪಂಗಾಯ, ಚಂದ್ರಶೇಖರ ಅಡ್ಪಂಗಾಯ, ವರ್ಷಿತ್ ಚೊಕ್ಕಾಡಿ, ಅಶೋಕ ಅಡ್ಕಾರ್, ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ,ದೇವಿಪ್ರಸಾದ್ ಅತ್ಯಾಡಿ, ರೂಪೇಶ್ ಪೂಜಾರಿಮನೆ, ಭರತ್ ಪಿ.ಯು ಮತ್ತಿತರರು ಭಾಗವಹಿಸಿದರು.