ಕನಕಮಜಲು ಪ್ರಾ.ಕೃ.ಪ.ಸ.ಸಂಘ ಜಾಲ್ಸೂರು ವಾರ್ಷಿಕ ಮಹಾಸಭೆ

0

ಸಂಘದಿಂದ 179.36 ಕೋಟಿ ವಾರ್ಷಿಕ ವ್ಯವಹಾರ 62, 33, 170.83 ನಿವ್ವಳ ಲಾಭ

ಸದಸ್ಯರುಗಳಿಗೆ ಶೇ.10 ಡಿವಿಡೆಂಡ್ ವಿತರಣೆ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ 2023 – 24ನೇ ಸಾಲಿನ ವಾರ್ಷಿಕ ಮಹಾಸಭೆಯು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ಶ್ರೀ ಗುರುಸಾರ್ವಭೌಮ ಕಲಾವೇದಿಕೆಯಲ್ಲಿ ಸೆ.12ರಂದು ಜರುಗಿತು.

ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರು ವರದಿ ಮಂಡಿಸಿದರು.
ಸಂಘವು 2023 – 24ನೇ ಸಾಲಿನ ಪ್ರಸಕ್ತ ವರ್ಷದಲ್ಲಿ 179.36 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, 62,33, 170, 83 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಈ ಬಾರಿ ಶೇ.10 ಡಿವಿಡೆಂಡ್ ವಿತರಿಸಲಾಗುವುದು ಎಂದು ಅಧ್ಯಕ್ಷರಾದ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಘೋಷಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂದ ಅಧಿಕ ಅಂಕ ಪಡೆದ ಸಹಕಾರಿ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ನಿರ್ದೇಶಕರುಗಳಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಶ್ರೀಕೃಷ್ಣ ಭಟ್ ನೆಡಿಲು, ಮಹೇಶ್ವರ ಕಾರಿಂಜ, ಗಣೇಶ ಅಂಬಾಡಿಮೂಲೆ, ಶ್ರೀಮತಿ ಸಾವಿತ್ರಿ ಕಾರಿಂಜ,ಶ್ರೀಮತಿ ಭಾರತಿ ಪಿ.ಕೆ. ಕಜೆಗದ್ದೆ, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಸೀತಾರಾಮ ಮಠ,ಶೇಷಪ್ಪ ನಾಯ್ಕ ಕಜೆಗದ್ದೆ, ಸುಖೇಶ್ ಕೋನಡ್ಕಪದವು, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಬಾಲಕೃಷ್ಣ ಪಿ., ಸಂಘದ ಕಾನೂನು ಸಲಹೆಗಾರರುಗಳಾದ ದೇವಿಪ್ರಸಾದ್ ಆಳ್ವ, ಚಂದ್ರಶೇಖರ ಕೆ., ಆಂತರಿಕ ಲೆಕ್ಕಪರಿಶೋಧಕ ಕುಶಾಲಪ್ಪ ಗೌಡ ಕಣಜಾಲು ಉಪಸ್ಥಿತರಿದ್ದರು.

ಸಭೆಯಲ್ಲಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸ್ವರೂಪ್ ಪಿ.ಆರ್., ಶಾಖಾ ವ್ಯವಸ್ಥಾಪಕರುಗಳಾದ ಶ್ರೀಮತಿ ಭಾರತಿ ಎಂ.ಪಿ., ಶ್ರೀಮತಿ ಹರಿಣಾಕ್ಷಿ ಎಸ್., ಗುಮಾಸ್ತ ಧರ್ಮಪಾಲ ಕೆಮನಬಳ್ಳಿ, ಮಾರಾಟ ಗುಮಾಸ್ತರುಗಳಾದ ರಾಮಣ್ಣ ನಾಯ್ಕ ಮರಸಂಕ, ಗಂಗಾಧರ ಅಡ್ಕಾರು, ದಿನಗೂಲಿ ನೌಕರರುಗಳಾದ ಸುಧೀರ್ ರೈ ಕುಕ್ಕಂದೂರು, ಸ್ವಸ್ತಿಕ್ ಕುತ್ಯಾಳ, ಪಿಗ್ಮಿ ಠೇವಣಿ ಸಂಗ್ರಹಗಾರರುಗಳಾದ ಬಾಲಕೃಷ್ಣ ಮಣಿಯಾಣಿ ಮರಸಂಕ ಹಾಗೂ ಸತೀಶ್ ಬೊಮ್ಮೆಟ್ಟಿ ಉಪಸ್ಥಿತರಿದ್ದು, ಸಹಕರಿಸಿದರು.
ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು ಅವರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ ಅವರು ವಂದಿಸಿದರು.