ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆ

0

ಅಧ್ಯಕ್ಷರಾಗಿ ದಿಶಾಂತ್ ಎಸ್.ಎಲ್., ಕಾರ್ಯದರ್ಶಿಯಾಗಿ ಕಾರ್ತಿಕ್ ಯು.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ವಿದ್ಯಾರ್ಥಿ ಸಂಘದ ಚುನಾವಣೆಯು ಸೆ. 12 ರಂದು ನಡೆದಿದ್ದು, ವಿದ್ಯಾರ್ಥಿ ಸಂಘದ‌ ಅಧ್ಯಕ್ಷರಾಗಿ ಅಂತಿಮ ಬಿಎ, ದಿಶಾಂತ್ ಎಸ್ .ಎಲ್, ಉಪಾಧ್ಯಕ್ಷರಾಗಿ ಅಂತಿಮ ಬಿಎ ಕಲ್ಪನಾ ‌ವೈ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿಕಾಂ ನ ಕಾರ್ತಿಕ್ ಯು ಅವರು ಆಯ್ಕೆಯಾಗಿರುತ್ತಾರೆ. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಸಂಘದ ಸಂಯೋಜಕ ಡಾ. ಪ್ರಸಾದ.ಯನ್ ಹಾಗೂ ಸದಸ್ಯರಾದ ಶಿವಪ್ರಸಾದ್ ಎಸ್ ಹಾಗೂ ಅಶ್ವಿನಿ ಎಸ್ ಎನ್ ಮತ್ತಿತರರು ಆಯ್ಕೆ ಪ್ರಕ್ರಿಯೆ ನಡೆಸಿದರು.