ಪಯಸ್ವಿನಿ ಸ್ತ್ರೀಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಸುಳ್ಯ ತಾಲೂಕು ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 10 ರಂದು ಸುಳ್ಳದ ಸ್ತ್ರೀಶಕ್ತಿ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷತೆಯನ್ನು ಶ್ರೀಮತಿ ಉಷಾ ಜಯರಾಮ್ ರವರು ವಹಿಸಿದ್ದರು.
ಸಂಘದ ಕಾರ್ಯದರ್ಶಿ ಕವಿತಾರವರು 2023- 24ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಆಡಿಟ್ ವರದಿಯನ್ನು ವಾಚಿಸಿದರು. 2024 -25 ನೇ ಸಾಲಿಗೆ ತಯಾರಿಸಿದ ಅಂದಾಜು ಬಜೆಟ್ ಅನ್ನು ನಿರ್ದೇಶಕರಾದ ಶ್ರೀಮತಿ ರೇವತಿಯವರು ಮಂಡಿಸಿದರು. ಸಂಘದ ಅಧ್ಯಕ್ಷರು ಲಾಭದ ಬಗ್ಗೆ ತಿಳಿಸಿ ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರು ಕೈಜೋಡಿಸಬೇಕೆಂದು ಹೇಳಿದರು.
ಸಂಘದ ಪದನಿಮಿತ್ತ ಸದಸ್ಯರಾದ ಪ್ರಭಾರ ಸಿಡಿಪಿಓ ಶ್ರೀಮತಿ ಶೈಲಜಾ ರವರು ಸಂಘದಲ್ಲಿ ಡಿಪಾಸಿಟ್ ಹಾಕುವಂತೆ ತಿಳಿಸಿದರು. ಸಂಘದ ಆರ್ಥಿಕ ಸಲಹೆಗಾರರಾದ ಪಿ.ಸಿ. ಜಯರಾಮರವರು ಸಂಘದ ಸಾಲ ಸೌಲಭ್ಯಗಳನ್ನು ತಿಳಿಸಿ ಸಂಘದ ಅಭಿವೃದ್ಧಿಗೆ ಪೂರಕವಾಗುವಂತೆ ಮಾತನಾಡಿದರು.
ಸಂಘದಲ್ಲಿ ಸದಸ್ಯರಾಗಿದ್ದು, ನಿಧನರಾದ ಸದಸ್ಯರ ಪಟ್ಟಿಯನ್ನು ನಿರ್ದೇಶಕಿ ಶ್ರೀಮತಿ ಸಂಧ್ಯಾರವರು ವಾಚಿಸಿದರು. ಮತ್ತು ಅಗಲಿದ ಸದಸ್ಯರಿಗೆ ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಹಾಸಭೆಯ ನೋಟಿಸ್ ಅನ್ನು ನಿರ್ದೇಶಕಿ ಶ್ರೀಮತಿ ಪಾರ್ವತಿಯವರು ಓದಿದರು. ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಯನ್ನು ನಿರ್ದೇಶಕಿ ಶ್ರೀಮತಿ ಹರ್ಷಿಣಿ ಕುಮಾರಿಯವರು ಓದಿದರು.
ಸಭೆಯಲ್ಲಿ ಸಂಘದ ನಿರ್ದೇಶಕರುಗಳಾದ ಪ್ರೇಮ, ಸುಲೋಚನಾ ದೇವ, ಸರಸ್ವತಿ ಸಿ.ಕೆ., ವನಜ ರೈ, ನಳಿನಿ ಜಯರವರು ಇದ್ದರು.
ಸಂಘದ ನಿರ್ದೇಶಕಿ ಶ್ರೀಮತಿ ನಿರ್ಮಲ ಎಂ. ಪ್ರಾರ್ಥಿಸಿದರು. ಅಧ್ಯಕ್ಷರು ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ಶ್ರೀಮತಿ ಲತಾ ಕುಮಾರಿ ವಂದಿಸಿದರು.