ಪೆರುವಾಜೆ : ಮುರ್ಕೆತ್ತಿ ವಾರ್ಡ್ ನಲ್ಲಿ ಕುಡಿಯುವ ನೀರಿನ ಫಲಾನುಭವಿಗಳ ಸಭೆ

0

ಪೆರುವಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುರ್ಕೆತ್ತಿ ವಾರ್ಡ್ ವ್ಯಾಪ್ತಿಯ ಕುಡಿಯುವ ನೀರಿನ ಫಲಾನುಭವಿಗಳ ಸಭೆ ಮುರ್ಕೆತ್ತಿ ಅಂಗನವಾಡಿ ಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೀರಿನ ಸಮಸ್ಯೆ, ನೀರಿನ ಬಿಲ್ ಪಾವತಿ ಮಾಡದೇ ಬಾಕಿ ವಸೂಲಿ ಮಾಡುವಂತೆ ಹಾಗೂ ನೀರು ಬಿಡುವ ವಾರ್ಡ್ ಜವಾಬ್ದಾರಿ, ಬಿಲ್ಲು ಸಂಗ್ರಹಣೆ ಬಗ್ಗೆ ಸಭೆ ನಡೆಯಿತು.
ಉಸ್ತುವಾರಿಯಾಗಿ ಇಬ್ರಾಹಿಂ ಅಂಬಟೆಗದ್ದೆ ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಹನಾಜ್ ಅಬ್ದುಲ್ ರಹೀಂ, ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಇಬ್ರಾಹಿಂ ಅಂಬಟೆ ಗದ್ದೆ, ವೆಂಕಪ್ಪ ಗೌಡ ನಾರ್ಕೋಡು, ಪಂಚಾಯಿತಿ ಸಿಬ್ಬಂದಿ ದಾಮೋದರ , ಶ್ರೀಮತಿ ನಮೀತಾ, ಪಂಚಾಯಿತಿ ಸಿಬ್ಬಂದಿ ಅಕ್ಷತಾ ಹಾಗೂ ಕುಡಿಯುವ ನೀರಿನ ಫಲಾನುಭವಿಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.