ಸುಳ್ಯ ನಗರ ಪಂಚಾಯತ್‌ ನಲ್ಲಿ ಮಾನವ ಸರಪಳಿಯ ಪೂಕಳಂ ರಚಿಸಿ ಓಣಂ ಆಚರಣೆ

0

ಸುಳ್ಯ ನಗರ ಪಂಚಾಯತ್ ನ ಪ್ರವೇಶ ದ್ವಾರದ ಎದುರು ಮಾನವ ಸರಪಳಿಯ ಪೂಕಳಂ ರಚಿಸಿ ಓಣಂ ಆಚರಿಸಿದರು.
ಈಗಾಗಲೇ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಡೀ ರಾಜ್ಯಾದ್ಯಂತ ಮಾನವ ಸರಪಳಿ ರಚಿಸುವ ಯೋಜನೆ ಹಮ್ಮಿಕೊಂಡಿದೆ ಇದಕ್ಕೆ ಪೂರಕವಾಗಿ ಸುಳ್ಯ ನಗರ ಪಂಚಾಯತ್ ನಲ್ಲಿ ಪಂಚಾಯತ್ ಸಿಬ್ಬಂದಿಗಳು ಓಣಂ ಸಂಭ್ರಮಕ್ಕೆ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟು ಓಣಂ ಪೂಕಳಂ ರಚಿಸಿ ಓಣಂ ಹಬ್ಬವನ್ನು ಆಚರಿಸಿ ಸಿಹಿತಿಂಡಿ ವಿತರಿಸಿದರು.


ನಗರ ಪಂಚಾಯತ್ ಸಿಬ್ಬಂದಿಗಳಾದ ಸುನೀತಾ, ಶಶಿಕಲಾಮಯ್ಯ,ಜಯಲಕ್ಷ್ಮಿ, ಸ್ವಾತಿ,ಸುಮತಿ,ಆಶಾ,ಚೇತನಾ,ಐಶ್ವರ್ಯ, ತೀರ್ಥಕಲಾ,ಜಯಲತಾ ಓಣಂ ಸಂಪ್ರದಾಯಿಕ ಉಡುಗೆ ತೊಟ್ಟಿದ್ದರು.