ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ವತ್ರೆಯಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ವರ್ಧೆ ಸಮಾರೋಪ ಹಾಗೂ ಸಾಂಪ್ರಾದಾಯಿಕ ದಿನ

0

  ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ವತ್ರೆಯಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ವರ್ಧೆ ಸಮಾರೋಪ ಹಾಗೂ ಸಾಂಪ್ರಾದಾಯಿಕ ದಿನ ನಡೆಯಿತು. ಡಾ||ಜೀವನ್ ರಾಮ್ ಸುಳ್ಯ ಅಧ್ಯಕ್ಷರು ರಂಗ ಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿರ್ದ್ಯಾಜನೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮಾನಸಿಕ ಒತ್ತಡಗಳನ್ನು ನಿವಾರಿಸಿ ನೆಮ್ಮದಿಯನ್ನು ನೀಡುತ್ತದೆ ಮತ್ತು ಸಾಂಪ್ರಾದಾಯಿಕ ಉಡುಗೆ ತೊಡುಗೆಗಳು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು  ಶುಭಹಾರೈಸಿದರು.





  ಈ ಸಂದರ್ಭದಲ್ಲಿ ಕಾಲೇಜಿನ ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ (ಬಿ)ಯ ಕಾರ್ಯದರ್ಶಿಗಳಾದ ಡಾ||ಜ್ಯೋತಿ ಆರ್ ಪ್ರಸಾದ್  ಉಪಸ್ಥಿತರಿದ್ದರು. ಹಾಗೂ ಡಾ||ಉಜ್ವಲ್ ಯು,ಜೆ ಸಿ.ಇ.ಓ ಇವರು ಮಾತಾನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮತ್ತು  ಕಾಲೇಜಿನ ಪ್ರಾಂಶುಪಾಲರಾದ ಡಾ||ಮೋಕ್ಷಾ ನಾಯಕ್ ಇವರು ಮಾತಾನಾಡಿ ದೇಶದ  ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಎಂದು ಶುಭಹಾರೈಸಿದರು. 



ಈ ಸಂಧರ್ಭದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಕಾಲೇಜಿನ ಭೋಧಕ ಭೋಧಕೇತರ  ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



 ಕಾರ್ಯಕ್ರಮದಲ್ಲಿ ಕಾಲೇಜಿನವತಿಯಿಂದ ಡಾ|| ಜೀವನ್ ರಾಮ್ ಸುಳ್ಯ ಇವರ ಕಲಾಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಡಾ||ಅನುಜ್ಞಾ ಬಿ.ಎಂ ಸಮ್ಮಾನಿತರನ್ನು ಪರಿಚಯಿಸಿದರು.ಸಾಂಸ್ಕೃತಿಕ ಸ್ವರ್ಧಾವಿಜೇತರನ್ನು ಗೌರವಿಸಲಾಯಿತು, ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸಾಂಪ್ರಾದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದರು ಕಾರ್ಯಕ್ರಮವನ್ನು ಅನನ್ಯ ಪ್ರಭು ಪ್ರಾರ್ಥಿಸಿ, ಡಾ|| ಅಮೃತ್ ಸ್ವಾಗತಿಸಿ, ಡಾ||ರೋಶನ್ ಧನ್ಯವಾದವನ್ನು ಮಾಡಿ ಹಾಗೂ ಡಾ|| ಸಿದ್ಧಾರ್ಥ್ ಮತ್ತು ಡಾ||ಫಾತಿಮಾತ್ ಶಿದಾ ಪಿ.ಎಂ  ಕಾರ್ಯಕ್ರಮವನ್ನು ನಿರ್ವಹಿಸಿದರು.