ಮಕ್ಕಳೊಂದಿಗೆ ಬೆರೆತು ಖುಷಿಪಟ್ಟ ಅವ್ವ ,ತಾತಂದಿರು…!
ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಸೆ.12ರಂದು ಗ್ರಾಂಡ್ ಪೇರೆಂಟ್ಸ್ ದಿನಾಚರಣೆಯನ್ನು ಆಚರಿಸಲಾಯಿತು.
ಮನೆಯ ಹಿರಿಯರ ಮಹತ್ವವನ್ನು ಮಕ್ಕಳಿಗೆ ತಿಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿ ಕಮಲಾಕ್ಷಿ ರವರು ಆಗಮಿಸಿ, ಮಾತನಾಡಿದರು.
ಆಗಮಿಸಿದ ಮಕ್ಕಳ ಅಜ್ಜಿ, ತಾತಂದಿರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು.
ಹಾಗೂ ಹಿರಿಯರು ಮಕ್ಕಳಿಗೆ ಕಥೆ, ಹಾಡನ್ನು ಹೇಳಿ, ಮನೆಯಿಂದ ಮಾಡಿ ತಂದ ತಿನಿಸುಗಳನ್ನು ನೀಡಿ ಖುಷಿಪಟ್ಟರು.
ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಟಿ. ಜಿ. ಹಾಗೂ ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು.