ಕೃಷಿ ಯಂತ್ರೋಪಕರಣಗಳಿಗೆ ಮನೆ ಮಾತಾಗಿರುವ

0

ದೇವಿ ಇಂಜಿನಿಯರಿಂಗ್ ಏಜೆನ್ಸೀಸ್ ಸ್ಥಳಾಂತರಗೊಂಡು ಶುಭಾರಂಭ

ಕೃಷಿ ಯಂತ್ರೋಪಕರಣಗಳ ಹೊಸ ಹೊಸ ಆವಿಷ್ಕಾರಗಳಿಂದ ಮನೆ ಮಾತಾಗಿರುವ, 16 ವರ್ಷಗಳಿಂದ ಕೃಷಿಕರಿಗೆ ಗುಣಮಟ್ಟದ ಸೇವೆ ನೀಡುತ್ತಿರುವ ಸೀತಾರಾಮ ಚೀಮುಳ್ಳು ಮಾಲಕತ್ವದ ದೇವಿ ಇಂಜಿನಿಯರಿಂಗ್ ಏಜೆನ್ಸೀಸ್ ಮಳಿಕೆ ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಹಳೆಗೇಟು ಸಂತೃಪ್ತಿ ಹೋಟೆಲ್ ಬಳಿಯ ರೆಹಮಾನಿಯಾ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಸೆ.14ರಂದು ಶುಭಾರಂಭಗೊಂಡಿತು.

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮರು ರಿಬ್ಬನ್ ಕತ್ತರಿಸಿ ಸಂಸ್ಥೆಯನ್ನು ಉದ್ಘಾಟಿಸಿದರೆ, ಪ್ರಗತಿಪರ ಕೃಷಿಕರಾದ ಜಾನ್ ವಿಲಿಯಂ ಲಸ್ರಾದೋ ದೀಪ ಪ್ರಜ್ವಲನೆಗೈದರು.

ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ.ಶಹೀದ್, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪಂಜ ದೇವಿ ಹ್ಯಾಮರ್ಸ್ ಮಾಲಕ ನವೀನ್ ಕುಮಾರ್ ಚೀಮುಳ್ಳು, ರೆಹಮಾನಿಯ ಕಾಂಪ್ಲೆಕ್ಸ್ ಮಾಲಕ ಬಿ.ಮಹಮ್ಮದ್ ಮುಸ್ತಫ ಮುಖ್ಯ ಅತಿಥಿಗಳಾಗಿದ್ದರು.

ಸೀತಾರಾಮ ಚೀಮುಳ್ಳುರವರ ತಂದೆ ಹರಿಯಪ್ಪ ಗೌಡ ಚೀಮುಳ್ಳು – ತಾಯಿ ಪುಷ್ಪ ಹರಿಯಪ್ಪ ವೇದಿಕೆಯಲ್ಲಿದ್ದರು.

ಮಾಲಕ ಸೀತಾರಾಮ ಚೀಮುಳ್ಳು ಅತಿಥಿಗಳನ್ನು ಬರಮಾಡಿಕೊಂಡರು. ಶ್ರೀಮತಿ ಪುಷ್ಪಾವತಿ ಸೀತಾರಾಮ ಸ್ವಾಗತಿಸಿದರು. ಚೆನ್ನಕೇಶವ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮರ ಮಕ್ಕಳಾದ ಅನ್ಸುಮಾನ್ ಮತ್ತು ಅನಿಂದ್ರಿತ ಹಾಗೂ ಬಂಧು, ಮಿತ್ರರು, ಕೃಷಿಕರು ಸಮಾರಂಭದಲ್ಲಿ ಇದ್ದರು. ಲತಾ ಎಸ್.ಮಾವಜಿ ವಂದಿಸಿದರು.