ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಮಹಾಸಭೆ

0

89 ಕೋಟಿ ವ್ಯವಹಾರ, 17.10 ಲಕ್ಷ ಲಾಭ

ಪಂಬೆತ್ತಾಡಿ ಪ್ರಾ.ಕೃ.ಪ.ಸ. ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 14ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.


ಅಧ್ಯಕ್ಷ ಜಾಕೆ ಮಾಧವ ಗೌಡರು ಸ್ವಾಗತ ಮಾತುಗಳೊಂದಿಗೆ ಮಾತನಾಡುತ್ತಾ ನಮ್ಮೂರಿನ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ ಉತ್ತಮ ರೀತಿಯಲ್ಲಿ ಮುನ್ನಡೆಯಬೇಕಾದರೆ ಸದಸ್ಯರ ಸರ್ವ ರೀತಿಯ ಸಹಕಾರ ಅಗತ್ಯ. ಆಡಳಿತ ಮಂಡಳಿಯ ವತಿಯಿಂದ ಸದಸ್ಯರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಕಲ್ಲಿಸುತ್ತಾ ಬಂದಿದ್ದೇವೆ ಎಂದರು. ಬಳಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ವರದಿ ಸಾಲಿನಲ್ಲಿ ಸಂಘವು 9.20ಕೋಟಿ ಠೇವಣಾತಿ ಹೊಂದಿ, ರೂ. 14.93 ಕೋಟಿ ಹೊರಬಾಕಿ ಸಾಲ ಹೊಂದಿದೆ. ವ್ಯಾಪಾರ ವಿಭಾಗದಲ್ಲಿ 1.13ಕೋಟಿ ವ್ಯವಹಾರ ನಡೆಸಿ ರೂ. 6.70ಲಕ್ಷ ಲಾಭ ಗಳಿಸಿದೆ. ಒಟ್ಟು ರೂ. 89.22 ಕೋಟಿ ವ್ಯವಹಾರ ನಡೆಸಿ, ರೂ. 17.10 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 6.50ಡಿವಿಡೆಂಟ್ ವಿತರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು .ಸಂಘದ ಸದಸ್ಯೆ ಶ್ರೀಮತಿ ಪುಷ್ಪಾವತಿ ಭೀಮಗುಡ್ಡೆ ಪ್ರಾರ್ಥಿಸಿದರು.


ಉಪಾಧ್ಯಕ್ಷ ಕುಲ್ದೀಪ್ ಸುತ್ತುಕೋಟೆ ವಂದಿಸಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಮಹೇಶ್ ಕುಮಾರ್ ಕರಿಕ್ಕಳ, ಜಯರಾಮ ಬೆಳಗಜೆ, ಗಣೇಶ್ ಪ್ರಸಾದ್ ಭೀಮಗುಳಿ, ಶ್ರೀನಿವಾಸ ಭೀಮಗುಳಿ, ವೆಂಕಪ್ಪ ಎನ್.ಪಿ, ರೋಹಿತಾಶ್ವ ಚೀಮುಳ್ಳು, ಧರ್ಮಣ್ಣ ನಾಯ್ಕ್ ಗರಡಿ, ಶ್ರೀಮತಿ ಮುಕಾಂಬಿಕಾ, ಶ್ರೀಮತಿ ಭಾಗೀರಥಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ವರ್ಗ ಸಹಕರಿಸಿದರು.