ನಾಳೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

0

ಚಾಮರಾಜನಗರದಿಂದ ಬೀದರ್‌ವರೆಗೆ ಮಾನವ ಸರಪಳಿ

ಸುಳ್ಯ ತಾಲೂಕಿನ ಜನತೆ ಹೆದ್ದಾರಿಗುಂಟ ಭಾಗವಹಿಸಲು ತಹಶೀಲ್ದಾರ್ ಮನವಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಸೆ. 15 ರಂದು ಕರ್ನಾಟಕ ರಾಜ್ಯದ ನಾಗರಿಕರಲ್ಲಿ ವಿಶೇಷ ಅರಿವು ಮೂಡಿಸುವ ಉದ್ಧೇಶದಿಂದ ಕರ್ನಾಟಕ ಸರಕಾರವು ಚಾಮರಾಜನಗರದಿಂದ ಬೀದರ್‌ವರೆಗೆ ಮಾನವ ಸರಪಳಿ ಏರ್ಪಡಿಸಲು ನಿರ್ಧರಿಸಿದ್ದು, ಅದರ ಅಂಗವಾಗಿ ಸುಳ್ಯ ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೆ ನಾಳೆ ಬೆಳಿಗ್ಗೆ ೯.೩೦ಕ್ಕೆ ಮಾನವ ಸರಪಳಿ ನಡೆಯಲಿದೆ. ಪುತ್ತೂರು-sಸುಳ್ಯ ಗಡಿಭಾಗವಾದ ಪೆರ್ನಾಜೆ ಬಳಿಯಿಂದ ಕೊಡಗು -ದ.ಕ. ಗಡಿಭಾಗವಾದ ಸಂಪಾಜೆ ಗೇಟ್‌ನವರೆಗೆ ಈ ಮಾನವ ಸರಪಳಿ ನಡೆಯುವುದು.


ಬೆಳಿಗ್ಗೆ ೯.೩೦ರಿಂದ ೯.೩೭ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವುದು, ಬೆಳಿಗ್ಗೆ ೯.೩೭ರಿಂದ ೯.೪೦ರವರೆಗೆ ನಾಡಗೀತೆ ಹಾಡುವುದು, ೯.೪೧ರಿಂದ ೯.೫೫ರವರೆಗೆ ಮುಖ್ಯ ಅತಿಥಿಗಳಿಂದ ಭಾಷಣ, ೯.೫೫ರಿಂದ ೯.೫೭ರವರೆಗೆ ಸಂವಿಧಾನದ ಪ್ರಸ್ತಾವನೆ ಓದುವುದು, ೯.೫೭ರಿಂದ ೯.೫೯ರವರೆಗೆ ಮಾನವ ಸರಪಳಿಯಲ್ಲಿ ಕೈ ಕೈ ಹಿಡಿದು ನಿಲ್ಲುವುದು, ೯.೫೯ರಿಂದ ೧೦ ಗಂಟೆಯವರೆಗೆ ಮಾನವ ಸರಪಳಿಯಲ್ಲಿ ತಮ್ಮ ಎರಡೂ ಕೈಗಳನ್ನು ಮೇಲತ್ತಿ ಜೈ ಹಿಂದ್, ಜೈ ಕರ್ನಾಟಕ್ ಎಂದು ಘೋಷಣೆ ಕೂಗಿ ಸರಪಳಿಯನ್ನು ಕಳಚುವುದು. ಈ ಕಾರ್ಯಕ್ರಮದ ಬಳಿಕ ಸಸಿ ನೆಡುವ ಕಾರ್ಯಕ್ರಮವನ್ನು ಏರ್ಪಡಿಸುವುದು.


ಈ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ತಾಲೂಕಿನ ಜನತೆ ೯.೩೦ರಿಂದ ೧೦ ಗಂಟೆಯವರೆಗೆ ಹೆದ್ದಾರಿ ಬದಿಯಲ್ಲಿ ನಿಂತು ಮಾನವ ಸರಪಳಿಯಲ್ಲಿ ಕೈ ಜೋಡಿಸಬೇಕೆಂದು ಸುಳ್ಯ ತಹಶೀಲ್ದಾರ್ ಎಂ. ಮಂಜುನಾಥ್ ವಿನಂತಿಸಿದ್ದಾರೆ.