ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

257 ಕೋಟಿ ವಾರ್ಷಿಕ ವ್ಯವಹಾರ 33,81, 476 ನಿವ್ವಳ ಲಾಭ

ಸದಸ್ಯರುಗಳಿಗೆ ಶೇ.8.75 ಡಿವಿಡೆಂಡ್ ವಿತರಣೆ

ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ 2023 – 24ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೆ.14ರಂದು ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ ಊರುಬೈಲು ಅವರು ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ಎನ್.ಅನಂತ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ 2023 – 24ನೇ ಸಾಲಿನಲ್ಲಿ ಸಹಕಾರಿ ಸಂಘವು ಒಟ್ಟು 257 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸಿದ್ದು, 33,81,476 ರೂ. ಲಾಭಗಳಿಸಿಕೊಂಡಿದೆ. ಸದಸ್ಯರುಗಳಿಗೆ ಈ ಬಾರಿ 8.75 ಡಿವಿಡೆಂಡ್ ವಿತರಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಸಹಕಾರಿ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾನಿಧಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಬಿ.ಕೆ., ನಿರ್ದೇಶಕರುಗಳಾದ ದಯಾನಂದ ಪನೇಡ್ಕ, ಆದಂಕುಂಞಿ ಸಂಟ್ಯಾರ್, ಗಣಪತಿ ಬಲ್ಯಮನೆ, ಯಶವಂತ ದೇವರಗುಂಡ, ಶ್ರೀಮತಿ ಮನೋರಮಾ ಬಿ.ಎಸ್., ಶ್ರೀಮತಿ ವಾಣಿ ಕೆದಂಬಾಡಿ, ಕಿಶನ್ ಪೊನ್ನಾಟಿಯಂಡ, ರಾಮಮೂರ್ತಿ ಎಂ.ಟಿ., ವಸಂತ ನಾಯ್ಕ ಕೆ.ಸಿ., ಪಕ್ಕೀರ, ದಿನೇಶ್ ಸಣ್ಣಮನೆ ಉಪಸ್ಥಿತರಿದ್ದರು.

ಸಭೆಯಲ್ಲಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು ಸೇರಿದಂತೆ ಸಹಕಾರಿ ಸಂಘದ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ ಊರುಬೈಲು ಅವರು ಸ್ವಾಗತಿಸಿ, ಉಪಾಧ್ಯಕ್ಷ ರಾಜಾರಾಮ ಕಳಗಿ ಅವರು ವಂದಿಸಿದರು.
ಸಹಕಾರಿ ಸಂಘದ ಸಿಬ್ಬಂದಿಗಳು ಸಹಕರಿಸಿದರು.