ಈದ್ ಮಿಲಾದ್ ಆಚರಣೆ ಅಂಗವಾಗಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0

ಕಾನೂನು ನಿಯಮಗಳನ್ನು ಪಾಲಿಸಿ ಶಾಂತಿಯುತವಾಗಿ ಹಬ್ಬ ಆಚರಣೆಯನ್ನು ಮಾಡಿ :ಎಸ್ ಐ ಸಂತೋಷ್

ಈದ್ ಮಿಲಾದ್ ಹಬ್ಬದ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಸೆ 15 ರಂದು ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಸುಳ್ಯ ಠಾಣಾ ವ್ಯಾಪ್ತಿಯ ಎಲ್ಲಾ ಮಸೀದಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಸ್ಥಳೀಯ ಮುಖಂಡರುಗಳು ಭಾಗವಹಿಸಿದ್ದರು.

ಸುಳ್ಯ ಠಾಣಾ ಉಪ ನಿರೀಕ್ಷಕರಾದ ಸಂತೋಷ್ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ತಮ್ಮ ವ್ಯಾಪ್ತಿಯ ಮಸೀದಿ ಗಳಲ್ಲಿ ಈದ್ ಮಿಲಾದ್ ಹಬ್ಬ ಆಚರಣೆಯನ್ನು ಶಾಂತಿಯುತವಾಗಿ ನಡೆಸಿ, ಯಾವುದೇ ಅಹಿತಕರ ಘಟನೆ ಉಂಟಾಗದಂತೆ ನೋಡಿಕೊಳ್ಳ ಬೇಕೆಂದು ಮುಖಂಡರಲ್ಲಿ ಸೂಚನೆ ನೀಡಿದರು.
ಮಿಲಾದ್ ಮೆರವಣಿಗೆ ವೇಳೆ ಇತರ ವಾಹನಗಳಿಗೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗದಂತೆ ನೋಡಿಕೊಂಡು, ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಶಾಂತಿ ಉಂಟಾಗುವ ಘೋಷಣೆ ಹಾಕುವುದು,ಬೇರೆ ಬೇರೆ ದೇಶಗಳ
ಬ್ಯಾನರ್ ,ಧ್ವಜ, ಮುಂತಾದ ವಸ್ತುಗಳನ್ನು ಬಳಸುವುದು ಇಂತಹ ಯಾವುದೇ ಘಟನೆ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ಸೂಚನೆಗಳನ್ನು ನೀಡಿದರು. ಸುಳ್ಯ ನಾಡು ಶಾಂತಿ ಪ್ರಿಯ ನಾಡಾಗಿದ್ದು ಇದನ್ನು ಉತ್ತಮ ರೀತಿಯಲ್ಲಿ ನಾವು ಕಾಪಾಡಿಕ್ಕೊಂಡು ಹೋಗೋಣ ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಅಪರಾಧ ತನಿಖಾ ವಿಭಾಗದ ಎಸ್ ಐ ಕುಮಾರಿ ಸರಸ್ವತಿ ಉಪಸ್ಥಿತರಿದ್ದರು. ಸಭೆಗೆ ಮುಸ್ಲಿಂ ಸಮುದಾಯದ ಮುಖಂಡರುಗಳಾದ ಹಾಜಿ ಕೆ ಎಂ ಮುಸ್ತಫಾ ಜನತಾ,ಮಹಮ್ಮದ್ ಕುಂಞಿ ಗೂನಡ್ಕ,ಮಹಮ್ಮದ್ ಇಕ್ಬಾಲ್ ಎಲಿಮಲೆ,ನ. ಪಂ ಸದಸ್ಯ ಕೆ ಎಸ್ ಉಮ್ಮರ್,ಜಿ ಕೆ ಹಮೀದ್,ಅಬ್ದುಲ್ ರಹಿಮಾನ್ ಮೊಗರ್ಪಣೆ, ಎಸ್ ಕೆ ಹನೀಫ್ ಸಂಪಾಜೆ,ಅಂದ ಹಾಜಿ ಪ್ರಗತಿ, ಲತೀಫ್ ಅಡ್ಕರ್, ಎ ಬಿ ಅಬ್ಬಾಸ್ ಅಡ್ಕ, ಇಕ್ಬಾಲ್ ಸುಣ್ಣಮೂಲೆ,ಮಹಮ್ಮದ್ ನಝಿರ್ ಮೊದಲಾದವರು ಭಗವಾಹಿಸಿದ್ದರು.