ಮಾನವ ಸರಪಳಿಯಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗವಹಿಸಿದ ಕಲ್ಚರ್ಪೆ ಹೋರಾಟ ಸಮಿತಿ ಸದಸ್ಯರು

0

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಸ್ಪಂದನೆಯ ಭರವಸೆ ಬಳಿಕ ಪಟ್ಟಿ ತೆರವು

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಸೆ. 15 ರಂದು ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಳ್ಯದ ಕಲ್ಚರ್ಪೆ ಹೋರಾಟ ಸಮಿತಿ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕೈಯಲ್ಲಿ ಕಪ್ಪು ಬಾವುಟ ಹಿಡಿದು ನಿಂತ ಘಟನೆ ನಡೆದಿದೆ.

ಸುಳ್ಯ ನಗರ ಪ್ರದೇಶದ ಕಸವನ್ನು ಕಲ್ಚರ್ಪೆ ಪರಿಸರದಲ್ಲಿ ವಿಲೇವಾರಿ ಮಾಡುತ್ತಿದ್ದು, ಇದರಿಂದ ಪರಿಸರದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು ಸಂಭAದ ಪಟ್ಟ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಈ ರೀತಿಯ ಪ್ರತಿಭಟನೆಯನ್ನು ಮಾಡಿರುವ ಬಗ್ಗೆ ಹೋರಾಟ ಸಮಿತಿಯ ಮುಖಂಡರು ಸುದ್ದಿ ಗೆ ತಿಳಿಸಿದ್ದಾರೆ.

ಘಟನೆ ತಿಳಿದ ಸುಳ್ಯ ತಹಶೀಲ್ದಾರ್, ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರಿಗೆ ತಿಳಿ ಹೇಳಿ ಈ ಬಗ್ಗೆ ನ. ಪಂ ಅಧಿಕಾರಿಗಳ ಬಳಿ ಮಾತನಾಡಿ ಸಮಸ್ಯೆಗೆ ಸ್ಪಂದನೆ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಧರಿಸಿದ್ದ ಕಪ್ಪು ಪಟ್ಟಿಯನ್ನು ತೆರವು ಗೊಳಿಸಿರುವುದಾಗಿ ತಿಳಿದು ಬಂದಿದೆ.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಮುಖಂಡರುಗಳಾದ ಕೆ.ಗೋಕುಲ್ ದಾಸ್, ಅಶೋಕ್ ಪೀಚೆ, ಬಾಲಚಂದ್ರ, ವೆಂಕಟೇಶ್ ಕಲ್ಚರ್ಪೆ ಹಾಗೂ ಸ್ಥಳೀಯರಾದ ಯೂಸುಫ್ ಅಂಜಿಕ್ಕರ್, ಅನಿಲ್ ಪರಿವಾರಕಾನ, ಸುದೇಶ್ ಅರಂಬೂರು, ಉದಯ ಆಚಾರ್ಯ, ಕೃಷ್ಣ ನಾಯಕ್, ತವೀದ್, ನಾರಾಯಣ ಗೌಡ ಜಬಳೆ, ಮೋಹನ ಜಬಳೆ, ಪುಷ್ಪಾಧರ, ಅಶ್ವಥ್ ಹಾಗೂ ನೂರಾರು ಮಂದಿ ಭಾಗವಹಿಸಿದ್ದರು.