ಬ್ರೈಟ್ ಭಾರತದ ಪ್ರಥಮ ಡ್ರಾದಲ್ಲೆ ಯೋಧನಿಗೆ ಒಲಿದ 25 ಲಕ್ಷದ ಮನೆ

0

ತಿಂಗಳಿಗೆ ಒಂದು ಸಾವಿರ ರೂ.ಕಟ್ಟಿ – ಎರಡು ಬೆಡ್ ರೂಂನ ಮನೆ, ಕಾರು, ಚಿನ್ನ, ಲಕ್ಷ ರೂ. ನಿಮ್ಮದಾಗಿಸಿಕೊಳ್ಳಿ ಎಂದು ಪ್ರಚಾರ ನಡೆಸುತ್ತಾ ಆಕರ್ಷಣೆವೊಡ್ಡಿ ಗಿಫ್ಟ್ ಸ್ಕೀಂ ನಡೆಸುವ ಹಲವು ಸಂಸ್ಥೆಗಳ ಭರಾಟೆ ಕಳೆದೊಂದು ತಿಂಗಳಿನಿಂದ ದ.ಕ.ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು ಇಂತಹದೇ ಒಂದು ಸಂಸ್ಥೆಯ ಅದೃಷ್ಟದ ಗ್ರಾಹಕರಾಗಿ ಎಲಿಮಲೆಯ ಯೋಧರೊಬ್ಬರು ಮೂಡಿಬಂದಿದ್ದಾರೆ.

ಬ್ರೈಟ್ ಭಾರತ್ ಎಂಬ ಸಂಸ್ಥೆ ನಡೆಸಿದ ಡ್ರಾ ವೊಂದರಲ್ಲಿ ಎಲಿಮಲೆಯ ಯೋಧರೊಬ್ಬರ ಅದೃಷ್ಟ ಖುಲಾಯಿಸಿ 1 ಸಾವಿರ ರೂಪಾಯಿಗೆ 25 ಲಕ್ಷದ ಮನೆ ದೊರೆತ ಘಟನೆ ನಡೆದಿದೆ.

ಬ್ರೈಟ್ ಭಾರತ್ ಎಂಬ ಪುತ್ತೂರಿನ ಸಂಸ್ಥೆಯೊಂದು‌ ಮನೆ ಹಾಗೂ ಗೃಹೋಪಯೋಗಿ ವಸ್ತುಗಳು ಮತ್ತು ಕಾರುಗಳನ್ನೊಳಗೊಂಡ ಲಕ್ಕಿ ಡ್ರಾವನ್ನು ಆಯೋಜಿಸಿತ್ತು. ಅದರಲ್ಲಿ ಎಲಿಮಲೆಯ ಪೂರ್ಣೇಶ್ ಎಂಬವರು ಅವರ ಪತ್ನಿಯ ಹೆಸರಲ್ಲಿ‌ ಸೇರಿದ್ದರು.‌ ಇದರಲ್ಲಿ 20 ಡ್ರಾ ದಲ್ಲಿ ಒಟ್ಟು 6 ಮನೆಗಳು ಸೇರಿದಂತೆ ಇತರ ಬಂಪರ್ ಬಹುಮಾನಗಳು ಸೇರಿದ್ದವು. ಇದೀಗ 2ನೇ ಸೀಸನ್‌ನ ಮೊದಲ‌ ಡ್ರಾ ನಡೆದಾಗ ಮೊದಲ ಮನೆ ಎಲಿಮಲೆಯ ಪೂರ್ಣೇಶ್ ರವರ ಪತ್ನಿಗೆ ದೊರೆತಿರುವುದಾಗಿ ತಿಳಿದು ಬಂದಿದೆ.


ಈ ರೀತಿಯ ಎಂದೂ ನಿರೀಕ್ಷಿಸಿರದ ಬಂಪರ್ ಬಹುಮಾನಗಳಿಂದಾಗಿ ಇಂತಹ ಗಿಫ್ಟ್ ಸ್ಕೀಂಗಳ ಬಗ್ಗೆ ಅನುಮಾನ ಹೊಂದಿರುವ ಜನ ಕೂಡ ಈ ಸ್ಕೀಂಗಳತ್ತ ಆಕರ್ಷಿತರಾಗುತ್ತಿರುವುದು ಕಂಡುಬರುತ್ತಿದೆ.