ಗುತ್ತಿಗಾರು ಹಾಗೂ ಜಾಲ್ಸೂರು ನಲ್ಲಿ ಉಚಿತ ಇ.ಸಿ.ಜಿ ಸೆಂಟರ್ ಆರಂಭ

0

ಗುತ್ತಿಗಾರು ಮತ್ತು ಜಾಲ್ಸೂರಿನಲ್ಲಿ ಉಚಿತ ಇ.ಸಿ.ಜಿ ಸೇವೆ ಸೆ.14 ರಂದು ಆರಂಭವಾಗಿರುವುದಾಗಿ ತಿಳಿದು ಬಂದಿದೆ.


ಡಾ| ಪದ್ಮನಾಭ ಕಾಮತ್ ರವರ CAD FOUNDATION ಸಹಯೋಗದೊಂದಿಗೆ ಈ ಉಚಿತ ಇ.ಸಿ.ಜಿ ಸೇವೆ ಪ್ರಾರಂಭವಾಗಿದ್ದು ಗುತ್ತಿಗಾರಿನ ಸ್ವಾತಿ ಸಂಕೀರ್ಣ ದಲ್ಲಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಬಳಿಯಲ್ಲಿ ಹಾಗೂ ಜಾಲ್ಸೂರಿನ ಎನ್ ಇ ಕಾಂಪ್ಲೆಕ್ಸ್ ನಲ್ಲಿ ಉಚಿತ ಇ.ಸಿ.ಜಿ ಪರೀಕ್ಷಾ ಸೆಂಟರ್ ತೆರೆದಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸುವಂತೆ ಕೋರಲಾಗಿದೆ.