ಗುತ್ತಿಗಾರು : ಜಿಲ್ಲಾ ಮಟ್ಟದ ಕಬಡ್ಡಿ ಬಗ್ಗೆ ಆಯೋಜನಾ ಸಮಿತಿ ಮತ್ತು ಅಧಿಕಾರಿಗಳ ಸಭೆ

0


ನಾಳೆ ಗುತ್ತಿಗಾರಿನಲ್ಲಿ ನಡೆಯುವ ಪ್ರಾರ್ಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದ ಅಂತಿಮ ಸಿದ್ಧತೆಗಳ ಬಗ್ಗೆ ಹಾಗೂ ನಾಳೆಯ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಕಬ್ಬಡಿ ಆಯೋಜನ ಸಮಿತಿ ಮತ್ತು ಶಿಕ್ಷಣಾಧಿಕಾರಿಗಳ ಸಭೆ ಇಂದು ಪಿಎಂ ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ನಡೆಯಿತು.
ಸಭೆಯಲ್ಲಿ ಕ್ರೀಡಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಭಾರ ಎರಡು ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರುಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರುಗಳು, ಶಿಕ್ಷಕರುಗಳು, ಕಬಡ್ಡಿ ಆಯೋಜನ ಸಮಿತಿಯ ವಿವಿಧ ಆಯಾಮದ ಜವಾಬ್ದಾರಿಯ ಪದಾಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರು ಈ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸಂಪೂರ್ಣ ಯಶಸ್ವಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.