ಸರಕಾರದ ಸೌಲಭ್ಯ ಎಲ್ಲರಿಗೂ ಸಿಗುವಂತೆ ಮಾಡೋಣ : ಹಮೀದ್ ಕುತ್ತಮೊಟ್ಟೆ

0

ಸುಳ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆ

ಸರಕಾರ ಪಂಚ ಗ್ಯಾರಂಟಿ ಗಳನ್ನು ಅನುಷ್ಠಾನಗೊಳಿಸಿದ್ದು ಇದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತೆ ನಾವೆಲ್ಲರೂ ಪ್ರಯತ್ನಿಸೋಣ. ಅಧಿಕಾರಿಗಳು ಕೂಡಾ ತಮ್ಮ ತಮ್ಮ ವ್ಯಾಪ್ತಿಯ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಹೇಳಿದ್ದಾರೆ.

ಸೆ.19ರಂದು ತಾಲೂಕು ಪಂಚಾಯತ್ ನಲ್ಲಿ‌ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಮಾಸಿಕ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸದಸ್ಯ ಕಾರ್ಯದರ್ಶಿ ಇ.ಒ. ರಾಜಣ್ಣ ಸಭೆ ನಡೆಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ಶೇಖರ ಕಣೆಮರಡ್ಕ, ಭವಾನಿಶಂಕರ್ ಕಲ್ಮಡ್ಕ, ಎ.ಬಿ.‌ಅಬ್ಬಾಸ್ ಅಡ್ಪಂಗಾಯ, ಧನುಷ್‌ ಕುಕ್ಕೆಟ್ಟಿ, ಲತೀಫ್ ಅಡ್ಕಾರು, ಶಿಲ್ಪಾ ಇಬ್ರಾಹಿಂ, ರವಿ ಗುಂಡಡ್ಕ, ಶ್ರೀಮತಿ ಭವಾನಿ, ಧನುಷ್ ಕುಕ್ಕೆಟ್ಟಿ, ಸೋಮಶೇಖರ ಕೇವಳ, ರಾಜು‌ ನೆಲ್ಲಿಕುಮೇರಿ, ಈಶ್ವರ ಆಳ್ವ ಹಾಗೂ ಅಧಿಕಾರಿಗಳು ಇದ್ದರು.

ಗೃಹ ಲಕ್ಷ್ಮೀ, ಗೈಹಜ್ಯೋತಿ, ಶಕ್ತಿ, ಅನ್ನ ಭಾಗ್ಯ ಹಾಗೂ ಯುವಾನಿಧಿ ಯೋಜನೆಯ ಕುರಿತು ಪ್ರಗತಿಯ ಬಗ್ಗೆ ಚರ್ಚೆಗಳು ನಡೆಯಿತು.