ಆಲೆಟ್ಟಿ ರಸ್ತೆಯ ನಾಗಪಟ್ಟಣ ತಿರುವಿನಲ್ಲಿ ಕಾರು ಪಲ್ಟಿ- ಮಹಿಳೆ ಅಪಾಯದಿಂದ ಪಾರು

0

ಆಲೆಟ್ಟಿ ಕಡೆಯಿಂದ ಸುಳ್ಯಕ್ಕೆ ಮಹಿಳೆಯೋರ್ವರು ಚಲಾಯಿಸಿಕೊಂಡು ಬರುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗಿಳಿದು ಪಲ್ಟಿಯಾದ ಘಟನೆ ಸೆ.19 ರಂದು ನಾಗಪಟ್ಟಣದ ವಿಶ್ರಾಂತಿ ಗೃಹದ ಬಳಿ ಸಂಭವಿಸಿದೆ.
ಕಾರನ್ನು ಚಲಾಯಿಸುತ್ತಿದ್ದ ಮಹಿಳೆ ಒಬ್ಬರು ಮಾತ್ರ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಅನಾಹುತ ಅಪಾಯ ಸಂಭವಿಸಿಲ್ಲ.


ಕಾರಿನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದು ಬಂದಿದೆ. ಈ ತಿರುವು ಅಪಾಯಕಾರಿ ತಿರುವಾಗಿದ್ದು ಹಿಂದೆಯೂ ಈ ಸ್ಥಳದಲ್ಲಿ ಅನೇಕ ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.