ದೊಡ್ಡತೋಟ ದಲ್ಲಿ ಮೈರ್ಪಲ್ಲ ಬ್ರದರ್ಸ್ ಯುವಕರು ನಿರ್ಮಿಸಿದ ಬಸ್ ತಂಗುದಾಣದ ಉದ್ಘಾಟನೆ ನಡೆಯಿತು.
ಅಮರಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಹೊವಪ್ಪ ಗೌಡ ಆರ್ನೋಜಿ ಬಸ್ಸು ತಂಗುದಾಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹೇಶ್ ಮೆರ್ಕಜೆ, ಪ್ರವೀಣ್ ಯಸ್ ರಾವ್, ದಿನಕರ ಮಾಡಬಾಗಿಲು, ಕರುಣಾಕರ ಸಿಡ್ಲುಕಜೆ, ಮಾಧವ ನಂದಗೋಕುಲ ಉಪಸ್ಥಿತರಿದ್ದರು.
ಲೋಕೇಶ್ ಮೈರ್ಪಳ್ಳ,ರಕ್ಷಿತ್ ಮೈರ್ಪಳ್ಳ, ಉದಯ ಮೈರ್ಪ್ಪಳ್ಳ, ಸಂದೇಶ ನಳಿಯಾರು , ಹರಿಪ್ರಸಾದ್ ಮೇಲ್ತೋಟ,ತೀರ್ಥರಾಮ ನಳಿಯಾರು ಬಸ್ಸು ತಂಗುದಾಣ ನಿರ್ಮಿಸಿದ್ದರು.
ದಿನಕರ ಮಾಡಬಗಿಲು ಸಹಕರಿಸಿದರು.
ಒಂದೇ ಕಡೆ ಎರಡು ಬಸ್ಸುತಂಗಾಣ
ದೊಡ್ಡತೋಟದಲ್ಲಿ ಹಲವಾರು ವರ್ಷಗಳ ಹಿಂದೆ ಪಂಚಾಯತ್ ವತಿಯಿಂದ ಬಸ್ಸು ತಂಗುದಾಣ ನಿರ್ಮಿಸಲಾಗಿತ್ತು. ಅಲ್ಲದೇ ಇತ್ತೀಚಿಗೆ ಅದೇ ಬಸ್ಸುತಂಗುದಾಣಕ್ಕೆ ಟೈಲ್ಸ್ ಅಳವಡಿಸಿ ಸುಸಜ್ಜಿತಗೊಳಿಸಲಾಗಿತ್ತು. ಆದರೆ ಇದೇ ಬಸ್ಸು ತಂದುದಾಣದಿಂದ ವಾಹನ ಹತ್ತಲು ರಸ್ತೆ ದಾಟುವ ಸಂದರ್ಭ ವಿದ್ಯಾರ್ಥಿನಿಯೊಬ್ಬಳಿಗೆ ಅಪಘಾತವಾಗಿತ್ತು. ಹಾಗೂ ಹೆಚ್ಚಾಗಿ ಪ್ರಯಾಣಿಕರನ್ನು ಬಸ್ಸು, ವ್ಯಾನ್ ನವರು ರಸ್ತೆಯಲ್ಲಿಯೇ ನಿಲ್ಲಿಸಿ ಹತ್ತಿಸುವುದು ಇಳಿಸುವುದು ಮಾಡುತ್ತಾರೆ. ಇದರಿಂದಾಗಿ ವಿರುದ್ಧ ದಿಕ್ಕಿನಿಂದ ವಾಹನಗಳು ಬಂದರೂ ಬಸ್ಸು ತಂಗುದಾನದಿಂದ ರಸ್ತೆ ದಾಟುವಾಗ ಗಮನಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಸ್ತೆಯ ಇನ್ನೊಂದು ಭಾಗದಲ್ಲಿಯೂ ಬಸ್ಸು ತಂಗುದಾಣ ನಿರ್ಮಿಸಿ, ಅಪಾಯ ಸಂಭವಿಸದಂತೆ ಮಾಡಲಾಗಿದೆ.