ಕಲ್ಕುಡ ದೈವಸ್ಥಾನದಲ್ಲಿ ಹಿಂದೂ ಸಂಘಟನೆಗಳ ಪ್ರಮುಖರಿಂದ ಪ್ರಾರ್ಥನೆ
ಎಬಿವಿಪಿಯವರು ಭಾಗಿ
ಸೆ.23ರಂದು ವಿದಾರ್ಥಿನಿಯೊಂದಿಗೆ ಬಸ್ಸಿನಲ್ಲಿ ಅನ್ಯಕೋಮಿನ ಯುವಕನೊಬ್ಬ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಆ ಯುವಕನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಹಿಂದೂ ಸಂಘಟನೆಯ ಇಬ್ಬರನ್ನು ಪೋಲೀಸರು ಬಂಧಿಸಿರುವುದನ್ನು ಖಂಡಿಸಿರುವ ಹಿಂದೂ ಹಿತರಕ್ಷಣಾ ವೇದಿಕೆ ಇಂದು ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಯಿತು.
ಸುಳ್ಯಬಸ್ ನಿಲ್ದಾಣದಲ್ಲಿ ಸೇರಿದ ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಎಬಿವಿಪಿಯವರು ಮರರವಣಿಗೆ ಮೂಲಕ ಕಲ್ಕುಡ ದೈವಸ್ಥಾನಕ್ಕೆ ಸಾಗಿ ಅಲ್ಲಿ ಕೈಮುಗಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸೋಮಶೇಖರ ಪೈಕ, ವಿನಯ ಕುಮಾರ್ ಕಂದಡ್ಕ ವಿನಾಕಾರಣ ಹಿಂದೂ ಸಂಘಟನೆಯ ಮೇಲೆ ಸುಳ್ಳು ಕೇಸು ಹಾಕಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರಾರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಹರಿಪ್ರಸಾದ್ ಎಲಿಮಲೆ, ಪ್ರಕಾಶ್ ಯಾದವ್, ಲತೀಶ್ ಗುಂಡ್ಯ, ನವೀನ್ ಎಲಿಮಲೆ, ರಕ್ಷಿತ್, ಶಿವ ಪೂಜಾರಿ, ನಿಕೇಶ್ ಉಬರಡ್ಕ, ರೂಪೇಶ್ ಪೂಜಾರಿಮನೆ, ಪ್ರಶಾಂತ್ ಕಾಯರ್ತೋಡಿ, ರಾಜೇಶ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ, ಸುರೇಶ್ ಕಣೆಮರಡ್ಕ, ದೇವಿಪ್ರಸಾದ್ ಅತ್ಯಾಡಿ, ಭಾನುಪ್ರಕಾಶ್ ದೊಡ್ಡತೋಟ, ಮನೋಜ್ ಮಾರುತಿ, ಕೌಶಲ್ ಸುಳ್ಯ, ನ.ಪಂ.ಸದಸ್ಯೆ ಕಿಶೋರಿ ಶೇಟ್, ದುರ್ಗಾವಾಹಿನಿಯ ಪ್ರೀತಿಕಾ, ಎ.ಬಿ.ವಿ.ಪಿ. ಯವರು ಸೇರಿದಂತೆ ನೂರಾರು ಮಂದಿ ಇದ್ದರು.