ಮುಕ್ಕೂರು : ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

50,569 ರೂ.ಲಾಭ : ಸದಸ್ಯರಿಗೆ 7 ಶೇ.ಡಿವಿಡೆಂಟ್ ಘೋಷಣೆ

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.23 ರಂದು ಸಂಘದ ಕಚೇರಿ ವಠಾರದಲ್ಲಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2023-24 ನೇ ಸಾಲಿನಲ್ಲಿ 4.29 ಲಕ್ಷ ರೂ. ವ್ಯವಹಾರ ನಡೆಸಿದ್ದು 50,569 ರೂ.ನಿವ್ವಳ ಲಾಭ ದೊರೆತಿದೆ. ಲೆಕ್ಕ ಪರಿಶೋಧನೆಯಲ್ಲಿ‌ ಸಂಘಕ್ಕೆ ಎ ಗ್ರೇಡ್ ಲಭಿಸಿದ್ದು ಸದಸ್ಯರಿಗೆ ಶೇ.7 ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಘೋಷಿಸಲಾಯಿತು.

ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಹಾಲು ಪೂರೈಕೆ ಹೆಚ್ಚಳಗೊಳಿಸುವುದು, ನೂತನ ಕಟ್ಟಡ ನಿರ್ಮಾಣ ಸಂಘದ ಪ್ರಮುಖ ಗುರಿಯಾಗಿದ್ದು ಇದಕ್ಕೆ ಸರ್ವ ಸದಸ್ಯರು ಸಹಕಾರ ನೀಡಬೇಕು. ಸಂಘದಲ್ಲಿ ಒಟ್ಟು‌184 ಸದಸ್ಯರಿದ್ದು ಈ ಪೈಕಿ ಸಂಘದ ನಿಯಮಕ್ಕೆ ಅನುಸಾರವಾಗಿ ಇರುವ ಸದಸ್ಯರನ್ನು ಮಾತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸದಸ್ಯತ್ವ ‌ಪರಿಷ್ಕರಣೆ ನಡೆಸಲಾಗುವುದು ಎಂದು ಅವರು ಹೇಳಿದರು.

ಪ್ರೋತ್ಸಾಹಕ ಬಹುಮಾನ
ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಗಣೇಶ್ ಶೆಟ್ಟಿ ಕುಂಜಾಡಿ, ಜತ್ತಪ್ಪ ಪೂಜಾರಿ ಕುಂಜಾಡಿ, ಸುಮಲತಾ ರೈ, ಗುಣಮಟ್ಟದ ಹಾಲು ಪೂರೈಕೆ ಮಾಡಿದ ಜಗನ್ನಾಥ ರೈ ಮರಿಕೇಯಿ, ಹೇಮಲತಾ ಕೊಂಡೆಪ್ಪಾಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶೈಕ್ಷಣಿಕ ಸಾಧನೆಗಾಗಿ ವಿಸ್ತೃತಾ ರೈ ತೋಟದಮೂಲೆ, ವಿಶಾಲ್ ಕೂರೋಡಿ ಅವರನ್ನು ಗುರುತಿಸಲಾಯಿತು. ವಿಶಾಲ್ ಅವರ ಪರವಾಗಿ ಪೋಷಕ ಉಮೇಶ್ ಕೆಎಂಬಿ ಅವರು ಗೌರವ ಸ್ವೀಕರಿಸಿದರು.

ಸಂಘದ ಸದಸ್ಯ ಜೈನುದ್ದೀನ್ ತೋಟದಮೂಲೆ ಸಲಹೆ ಸೂಚನೆ ನೀಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ಸುಬ್ರಾಯ ಭಟ್ ನೀರ್ಕಜೆ, ಗುಡ್ಡಪ್ಪ ಗೌಡ ಅಡ್ಯತಕಂಡ, ದಯಾನಂದ ರೈ ಕನ್ನೆಜಾಲು, ಪ್ರೇಮನಾಥ ರೈ ಕಂರ್ಬುತ್ತೋಡಿ, ಕೇಶವ ಗೌಡ ಕಂಡಿಪ್ಪಾಡಿ, ಪೂವಪ್ಪ ನಾಯ್ಕ ಅಡೀಲು, ಸಾವಿತ್ರಿ ಚಾಮುಂಡಿಮೂಲೆ, ಸುಮಲತಾ ರೈ ಮರಿಕೇಯಿ ಉಪಸ್ಥಿತರಿದ್ದರು.

ಪುಣ್ಯ ಮತ್ತು ಪಲ್ಲವಿ ಪ್ರಾರ್ಥಿಸಿದರು. ಕಾರ್ಯದರ್ಶಿ ಸರಿತಾ ಕೆ ವರದಿ ಮಂಡಿಸಿದರು. ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ವಂದಿಸಿದರು. ಹಾಲು ಪರೀಕ್ಷಕಿ ಲಲಿತಾ, ಪ್ರಭಾರ ಕಾರ್ಯದರ್ಶಿ ನಯನ ಅಡ್ಯತಕಂಡ ಸಹಕರಿಸಿದರು. ಸಭೆಯಲ್ಲಿ ಊರ ಪ್ರಮುಖರಾದ ಮೋಹನ ಬೈಪಡಿತ್ತಾಯ, ನರಸಿಂಹ ತೇಜಸ್ವಿ ಕಾನಾವು, ಉಮೇಶ್ ಕೆಎಂಬಿ, ದಯಾನಂದ ಗೌಡ ಜಾಲು ಮೊದಲಾದವರು ಉಪಸ್ಥಿತರಿದ್ದರು.