ಆಲೆಟ್ಟಿ: ತೋಟದ ಕೆರೆಗೆ ವೃದ್ಧರೊಬ್ಬರು ಬಿದ್ದು ಆಕಸ್ಮಿಕ ಮೃತ್ಯು

0

ತೋಟದ ಕೆರೆಯಲ್ಲಿ ವೃದ್ಧರೊಬ್ಬರು ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ಇಂದು ಸಂಜೆ ಆಲೆಟ್ಟಿಯಲ್ಲಿ ವರದಿಯಾಗಿದೆ.
ಆಲೆಟ್ಟಿಯ ನಿವಾಸಿ ಶಂಕರ ಪಾಟಾಳಿ ಎಂಬವರು ಮೃತಪಟ್ಟ ವ್ಯಕ್ತಿ.


ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಮನೆಯಿಂದ ತೋಟದ ಕಡೆಗೆ ಹೋದವರು ಬಾರದೆ ಇದ್ದುದರಿಂದ ಪರಿಸರದಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಪಕ್ಕದ ಪರಮೇಶ್ವರ ಗೌಡ ಎಂಬವರ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಯಿತು.


ಬಳಿಕ ಸುಳ್ಯ ಪೋಲಿಸರು ಆಗಮಿಸಿ ಮಹಜರು ನಡೆಸಿದ ಬಳಿಕ ಪೋಸ್ಟ್ ಮಾರ್ಟಂ ಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಮೃತರು ಪತ್ನಿ ಶ್ರೀಮತಿ ಗೌರಿ ಆಲೆಟ್ಟಿ, ಪುತ್ರರಾದ ವಸಂತ ಆಲೆಟ್ಟಿ, ಸುರೇಶ್ ಆಲೆಟ್ಟಿ, ಪುತ್ರಿಯರಾದ ನಳಿನಾಕ್ಷಿ, ಕುಸುಮ ಹಾಗೂ ಸೊಸೆ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ, ಶ್ರೀಮತಿ ಸಂದ್ಯಾಸುರೇಶ್, ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.