ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ – ಪೂರ್ವಭಾವಿ ಸಭೆ

0

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವರ್ಷಗಳನ್ನು ಪೂರೈಸಿದ್ದು, ಇದರ ಸವಿನೆನಪಿಗೆ ಶತಮಾನೋತ್ಸವ ಸಮಿತಿಯನ್ನು ರಚಿಸಿ, ಬೇರೆ ಬೇರೆ ಯೋಜನೆಗಳನ್ನು ರೂಪಿಸಿಕೊಂಡು ಶತಮಾನೋತ್ಸವ ಆಚರಿಸಲು ತಯಾರಿ ನಡೆಸಲಾಗಿದ್ದು, ಡಿಸೆಂಬರ್ ತಿಂಗಳ 14, 15ರಂದು ಅದ್ದೂರಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.

ಸೆ.17ರಂದು ನಡೆದ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎ.ವಿ.ತೀರ್ಥರಾಮರವರ ಅಧ್ಯಕ್ಚತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ವೇದಿಕೆಯಲ್ಲಿ ಸಂಚಾಲಕರಾದ ಡಿ.ಟಿ.ದಯಾನಂದ, ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಹಾಗೂ ಖಜಾಂಜಿ ರಾಧಾಕೃಷ್ಣ ಮಾವಿನಕಟ್ಟೆ “ಶ್ರೀ ಕಟೀಲ್”, ಕಾರ್ಯದರ್ಶಿ ಗೋಪಿನಾಥ ಮೆತ್ತಡ್ಕ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಕ್ಷ್ಯ ಚಿತ್ರ ತಯಾರಿಸುವ ಬಗ್ಗೆಯೂ ನಿರ್ಧರಿಸಲಾಯಿತು.

ಸೆ.29ರಂದು ಹಳೆ‌ವಿದ್ಯಾರ್ಥಿ ಸಂಘದ ಸಭೆ

ಶತಮಾನೋತ್ಸವ ಕಾರ್ಯಕ್ರಮ ದಲ್ಲಿ‌ ಹಳೆ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಮಾಡಲು ಹಳೆ ವಿದ್ಯಾರ್ಥಿ ಸಂಘದ ಸಭೆಯು ಸೆ.29ರಂದು ನಡೆಯಲಿದೆ.

ಈ ಸಭೆಯಲ್ಲಿ ಸಂಘದ ಪುನರ್‌ರಚನೆ ಸೇರಿದಂತೆ ವಿವಿಧ ಚಟುವಟಿಕೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.