ದೇವಚಳ್ಳ ಗ್ರಾಮದ ಶ್ರೀ ವಿಷ್ಣು ಸೇವಾ ಸಮಿತಿ ಉದಯಗಿರಿ, ಮಾವಿನಕಟ್ಟೆ ಇದರ ವತಿಯಿಂದ ಓಣಂ ಆಚರಣೆಯು ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಿಷ್ಣು ಸಭಾಭವನದಲ್ಲಿ ಸೆ.22ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಿತಿಯ ಗೌರವಾಧ್ಯಕ್ಷ ಗಂಗಾಧರ ಕೇಪಳಕಜೆ ವಹಿಸಿದ್ದರು.
ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಕೇಪಳಕಜೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯರಾದ ಬಾಲಕೃಷ್ಣ ಮರೀಲ್, ನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ಚಾರ್ಮತ, ಕೆ.ಎಸ್.ಆರ್.ಟಿ.ಸಿ. ನಿವೃತ್ತ ಚಾಲಕ ಕುಮಾರ್ ಅಡ್ಡನಪಾರೆ, ಉದ್ಯಮಿ ಅನಿಲ್ ಗುತ್ತಿಗಾರು ಆಗಮಿಸಿ ಶುಭ ಹಾರೈಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಞ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಸಮುದಾಯದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಹಾಗೂ ಓಣಂ ಹಬ್ಬದ ವಿಶೇಷ ತಿರುವಾದಿರ ನೃತ್ಯ ಪ್ರದರ್ಶನ ನಡೆಯಿತು. ಅಲ್ಲದೇ ಸಮಾಜ ಸೇವಾ ಪುರಸ್ಕೃತ ಲೀಲಾ ಭಾಸ್ಕರ್ ರವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ಸಮಯದಾಯದ ಮಕ್ಕಳನ್ನು ಗೌರವಿಸಲಾಯಿತು.