ಗೂನಡ್ಕ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಬೃಹತ್ ಸ್ಕಾಲರ್ ಶಿಪ್ ಅಭಿಯಾನ

0

ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯಲ್ಲಿ ಸಕ್ರೀಯವಾಗಿರುವ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ (ರಿ) ಗೂನಡ್ಕ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಬೃಹತ್ ಸ್ಕಾಲರ್ಶಿಪ್ ಅಭಿಯಾನ ಕಾರ್ಯಕ್ರಮವು ಗೂನಡ್ಕದ ಅಲ್ ಅಮೀನ್ ವೆಲ್ಫೇರ್ ಕಚೇರಿ ಸಮೀಪದಲ್ಲಿ ಸೆ. 22 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬದ್ರಿಯಾ ಜುಮಾ ಗೂನಡ್ಕ ಸದರ್ ಮುಅಲ್ಲಿಮರಾದ ಅಬ್ದುಲ್ಲ್ ಲತೀಫ್ ಸಖಾಫಿ ದುವಾ ದೊಂದಿಗೆ ಉದ್ಘಾಟಿಸಿದರು, ಸಂಸ್ಥೆಯ ಅಧ್ಯಕ್ಷರಾದ ಜಾಫರ್ ಸಾಧಿಕ್ ಕುಂಭ ಕ್ಕೋಡ್ ಅವರು ಅಧ್ಯಕ್ಷತೆಯನ್ನು. ವಹಿಸಿದ್ದರು, ನಿಹ್ಮತುಲ್ಲಾ ಇಸಾಕ್ ಸರ್ವರನ್ನು ಸ್ವಾಗತಿಸಿದರು ಬದ್ರಿಯಾ ಜುಮಾ ಮಸೀದಿ ಗೂನಡ್ಕ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ದಾಮೋದರ ಮಾಸ್ಟರ್, ಅಬ್ದುಲ್ಲಾ ಮಾಸ್ಟರ್, ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಅಬೂಸಾಲಿ ಪಿ.ಕೆ, ಬಾಲಚಂದ್ರ ದರ್ಖಾಸ್,ಅಬ್ಬಾಸ್ ಹಾಜಿ, ರಶೀದ್ ಅಡ್ವೊಕೇಟ್, ಬದ್ರಿಯಾ ಜುಮಾ ಮಸೀದಿ ಪದಾಧಿಕಾರಿಗಳಾದ ಅಝರುದ್ದೀನ್ ಸಿ.ಎ,ಅಬ್ಬುಲ್ ಖಾದರ್ ಕುಂಭಕ್ಕೋಡ್,ಖಾದರ್D.R,ಹಾರಿಸ್ ಝಮ್ ಝಮ್, ಅಶ್ರಫ್ A.T, ಬದ್ರಿಯಾ ಜುಮಾ ಮಸೀದಿ ಸಲಹಾ ಸಮಿತಿ ಸದಸ್ಯರಾದ ಹಾಜಿ ಉಮ್ಮರ್ ಪಿ.ಎ, ಅಲ್ ಅಮೀನ್ ಪದಾಧಿಕಾರಿಗಳಾದ ಹಸೈನ್ ಎ.ಟಿ, ಮಹಮ್ಮದ್ ಪೆಲ್ತಡ್ಕ, ಅಝೀಝ್ T.B,ಜಾಬಿರ್ M.B,ಮಿರ್ಷಾದ್ ಚೇರೂರ್, ನೌಷಾದ್ ಕೂಲ್, ಉದ್ಯಮಿಗಳಾದ ಆರಿಫ್ T.A ಈ ಸಂದರ್ಭ ಉಪಸ್ಥಿತರಿದ್ದರು .


ಸರಿಸುಮಾರು 150 ಕ್ಕೂ ಅಧಿಕ ಎಲ್ಲಾ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಸಮಯದಲ್ಲಿ ನೋಂದಾವಣೆ ಪ್ರಕ್ರಿಯೆಯಲ್ಲಿ ಬಾಲಚಂದ್ರ ದರ್ಖಾಸ್, ನಿಹ್ಮತುಲ್ಲಾ ಇಸಾಕ್,ಮರ್ಝೂಕ್ ಶೇಕ್, ನಾಝಿಯ ದರ್ಖಾಸ್,ಆಯಿಷತ್ ಇಬಾನ, ಸಹಕರಿಸಿದರು.