ಕಂದ್ರಪಾಡಿ : ಸರ್ಕಾರಿ ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ರಚನೆ

0

ಸರ್ಕಾರಿ ಹಿ.ಪ್ರಾ, ಶಾಲೆ ಕಂದ್ರಪಾಡಿ ಇದರ ನೂತನ ಎಸ್‌.ಡಿ.ಎಂ‌.ಸಿ ರಚನೆಯಾಗಿದ್ದು ಅಧ್ಯಕ್ಷರಾಗಿ ವೀಣಾ ಕುಂಬಾರಕೇರಿ ಇವರನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಹರೀಶ್ ಆಚಾರಿಕಾನ ಇವರನ್ನು ಆಯ್ಕೆ ಮಾಡಲಾಗಿದೆ. ಎಸ್‌.ಡಿ.ಎಂ.ಸಿಯ ಸದಸ್ಯರಾಗಿ ವಾಣಿ ಎಂ.ವಿ, ದುರ್ಗಾವತಿ, ಜಯಂತಿ , ವಾಣಿ ಕೆ.ಡಿ, ವೀಣಾ, ಮಲ್ಲಿಕಾ, ಮಮತಾ, ಚಂದ್ರಶೇಖರ, ಗುರುವ, ರಾಜೇಶ , ಚಿತ್ರ, ಕಾವ್ಯವಾಣಿ, ಗೀತಾ ಇವರುಗಳು ಇದ್ದಾರೆ. ಈ ಸಂದರ್ಭ ದೇವಚಳ್ಳ ಗ್ರಾ. ಪಂ ಸದಸ್ಯ ಭವಾನಿ ಶಂಕರ್ ಉಪಸ್ಥಿತರಿದ್ದರು. ಶಿಕ್ಷಕರುಗಳಾದ ಅಜಯ್ ಸ್ವಾಗತಿಸಿ, ವಾಣಿ ಕೆ.ಎಸ್ ಧನ್ಯವಾದ ಮಾಡಿದರು.