ಸೆ.29 : ಐವರ್ನಾಡಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ,ಮಧುಮೇಹ ತಪಾಸಣೆ,ಸಿ.ಪಿ.ಆರ್ ತರಬೇತಿ ಶಿಬಿರ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಗ್ರಾಮ ಪಂಚಾಯತ್ ಐವರ್ನಾಡು ,ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಮಿತ್ರವೃಂದ ಬಾಂಜಿಕೋಡಿ, ಗೆಳೆಯರ ಬಳಗ ದೇರಾಜೆ, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ, ಸ್ಪೋರ್ಟ್ಸ್ ಕ್ಲಬ್ ಮಾಡತ್ತಕಾನ, ಯುವಶಕ್ತಿ ಸಂಘ ಐವರ್ನಾಡು, ವಾಹನ ಚಾಲಕ-ಮಾಲಕರ ಸಂಘ ಐವರ್ನಾಡು, ವರ್ತಕ ಸಂಘ ಐವರ್ನಾಡು ಇವರ ಸಹಭಾಗಿತ್ವದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ, ಮಧುಮೇಹ ತಪಾಸಣೆ, ಹೃದಯ ಸ್ಥಂಭನದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಸಿ.ಪಿ.ಆ‌ರ್. ತರಬೇತಿ ಶಿಬಿರವು ಸೆ.29 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 9.30 ರಿಂದ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಲಿದೆ.


ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.