ಅ.03 – ಅ.11: ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅ.03 ರಿಂದ ಅ.11 ರವರೆಗೆ ನವರಾತ್ರಿ ಉತ್ಸವವು ನಡೆಯಲಿರುವುದು.


ಪ್ರತೀ ದಿನ ರಾತ್ರಿ ಗಂಟೆ 7.15 ರಿಂದ 8.15 ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.


ರಾತ್ರಿ ಗಂಟೆ 7.30 ಕ್ಕೆ ದುರ್ಗಾ ಪೂಜೆ ನಡೆಯಲಿದೆ.


ಗಂಟೆ 8.30 ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.


ಅ.11 ರಂದು ಶುಕ್ರವಾರ ಆಯುಧ ಪೂಜೆ ನಡೆಯಲಿದೆ.


ಅ.12 ರಂದು ಶನಿವಾರ ವಿಜಯದಶಮಿಯಂದು ಅನ್ನಸಂತರ್ಪಣೆ ನಡೆಯಲಿದೆ.


ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.