ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದರಸ ಸಮಿತಿ ವತಿಯಿಂದ ಮಿಲಾದ್ ಫೆಸ್ಟ್ ಅಂಗವಾಗಿ ಸೆ. 22 ರಂದು ವಿದ್ಯಾರ್ಥಿಗಳ ಕಲೋತ್ಸವ ಮತ್ತು ಮೌಲಿದ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳ ಕಲೋತ್ಸವ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡು ಸಂಜೆ ಬಹುಮಾನ ವಿತರಣೆಯೊಂದಿಗೆ ಮುಕ್ತಾಯಗೊಂಡಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಮಸೀದಿ ಮದರಸ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ವಹಿಸಿದ್ದರು.
ಸಂಜೆ ನಡೆದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು.
ಬಳಿಕ ಮೌಲಿದ್ ಮಜ್ಲಿಸ್ ಹಾಗೂ ನಬಿ ಕೀರ್ತನಾ ಕಾರ್ಯಕ್ರಮ ಮೊಗರ್ಪಣೆ ಮಸ್ಜಿದ್ ನ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿಯವರ ನೇತೃತ್ವದಲ್ಲಿ ನಡೆದು ಸಯ್ಯಿದ್ ಝೖನುಲ್ ಆಭಿದೀನ್ ತಂಙಳ್ ರವರು ಸಾಮೂಹಿಕ ಪ್ರಾರ್ಥನೆ ನೆರವೇರಸಿದರು.
ವೇದಿಕೆಯಲ್ಲಿ ಮೊಗರ್ಪಣೆ ಎಚ್ ಐ ಜೆ ಕಮಿಟಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಪ್ರ.ಕಾರ್ಯದರ್ಶಿ ಎಸ್ ಯು ಇಬ್ರಾಹಿಂ,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಅರಂಬೂರು, ರಿಫಾಯಿ ದಫ್ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್,ಮಾಜಿ ಅಧ್ಯಕ್ಷ ಡಿ ಇಬ್ರಾಹಿಂ,ಜಮಾಅತ್ ಸದಸ್ಯ ಅಬ್ದುಲ್ ಖಾದರ್ ಶಾಂತಿನಗರ,ಮೊಗರ್ಪಣೆ ಮದರಸ ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಖಾಫಿ ಅಧ್ಯಾಪಕರುಗಳಾದ ಯೂಸುಫ್ ನಿಝಾಮಿ,ಹಂಝ ಸಖಾಫಿ, ನಾಸಿರ್ ಸಖಾಫಿ,ಅಬ್ದುಲ್ ರಶೀದ್ ಝೖನಿ, ಅಬೂಬಕ್ಕರ್ ಸಿದ್ದಿಕ್ ಸಅದಿ,ಮೂಸಾ ಮುಸ್ಲಿಯಾರ್ ಹಾಗೂ ಅಶ್ರಫ್ ಅಂಜುಮಿ,ಉಪಾಧ್ಯಕ್ಷ ಜಾಹಿರ್ ಜಯನಗರ,ಸಿದ್ದಿಕ್ ಕಟ್ಟೆಕ್ಕಾರ್ಸ್ ಮೊದಲಾದವರು ಉಪಸ್ಥಿತರಿದ್ದರು.
ಜಯನಗರ ಮದರಸ ಸದರ್ ಮುಅಲ್ಲಿಮ್ ಶಫೀಕ್ ಹಿಮಮಿ ಸ್ವಾಗತಿಸಿ ಕಾರ್ಯಕ್ರಮಕ್ರಮ ನಿರೂಪಣೆ ಮಾಡಿದರು. ಜೆ ಯು ಎಂ ಎಂ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಯುವಕರ ತಂಡದವರು ಸಹಕರಿಸಿದರು.ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿದರು.
ಮಧ್ಯಾಹ್ನ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕ ಸಂಘಟಕರು ಸಾರ್ವಜನಿಕರಿಗೆ ತಂಪು ಪಾನೀಯ,ಸಿಹಿ ತಿನಿಸು ವಿತರಿಸಿ ಮಿಲಾದ್ ನಬಿ ಆಚರಿಸಿದರು.ಕೊನೆಯಲ್ಲಿ ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘಟನೆ ವತಿಯಿಂದ ತಬರುಕ್ ವಿತರಣೆ ನೀಡಲಾಯಿತು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.