ಆಲೆಟ್ಟಿ: ಮೈಂದೂರು ಘನತ್ಯಾಜ್ಯ ಘಟಕ ನಿರ್ಮಾಣದ ಸ್ಥಳದಲ್ಲಿ ವಿರೋಧದ ಬ್ಯಾನರ್ ಪ್ರತ್ಯಕ್ಷ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಗೆ ಘನತ್ಯಾಜ್ಯ ಘಟಕ ನಿರ್ಮಿಸಲು ನಾರ್ಕೋಡು ವಾರ್ಡಿಗೆ ಸಂಬಂಧಿಸಿದಂತೆ ಮೈಂದೂರು ಎಂಬಲ್ಲಿ ಜಾಗ ಗುರುತಿಸಲಾಗಿದ್ದು ಈ ಜಾಗದಲ್ಲಿ ಕಸ ಹಾಕದಂತೆ ವಿರೋಧಿಸಿ ಬರಹದ ಬ್ಯಾನರೊಂದು ಪ್ರತ್ಯಕ್ಷವಾಗಿದೆ.

ಈ ಬಗ್ಗೆ ಪರಿಸರದ ನಾಗರಿಕರ ಜತೆ ಪಂಚಾಯತ್ ಆಡಳಿತ ಮಂಡಳಿಯವರು ಸಮಾಲೋಚನಾ ಸಭೆ ನಡೆಸಿದ್ದರು.
ಈ ಸಂದರ್ಭದಲ್ಲಿ ಪರಿಸರದ ನಾಗರಿಕರು ಘಟಕ ನಿರ್ಮಾಣಕ್ಕೆ ತೀವ್ರವಾಗಿ ವಿರೋಧ ಪಡಿಸಿದ್ದರು.

ಇದೀಗಮೈಂದೂರು, ಕಟ್ಟೆಕ್ಕಳ, ಎಲಿಕ್ಕಳ, ಭೂತಕಲ್ಲು, ಕುಡೆಕಲ್ಲು ಭಾಗದ
ನಾಗರಿಕರು ಎಂಬ ಹೆಸರಿನಡಿಯಲ್ಲಿ
ಪರಿಸರದ ನಾಗರಿಕರ ಜತೆ ಮಾತುಕತೆ ನಡೆಸದೆ ಸಹಿ ಸಂಗ್ರಹಿಸದೆ ಜಸ ಹಾಕಲು ಘಟಕ ನಿರ್ಮಾಣದ ಕುರಿತು ಏಕಮುಖವಾಗಿ ನಿರ್ಧಾರವನ್ನು ಕೈಗೊಂಡಿರುತ್ತಾರೆ.
ಈ ಜಾಗದಲ್ಲಿ ಪೂರ್ವಜರು ಆರಾಧಿಸಿಕೊಂಡು ಬರುತ್ತಿರುವ ನಾಗ ಸಾನಿಧ್ಯ,ಗುಳಿಗ ದೈವ‌ ಸಾನಿಧ್ಯ ಹಾಗೂ ಇತರ ದೈವಗಳ ಆರಾಧನೆಯ ಸ್ಥಳವಾಗಿದೆ. ಘಟಕ ನಿರ್ಮಿಸುವುದರಿಂದ ಪರಿಸರ ನಾಶವಾಗುವುದಲ್ಲದೆ ಕಾಡು ಪ್ರಾಣಿಗಳಿಗೆ ತೊಂದರೆಯಾಗುವುದು. ಆದ್ದರಿಂದ ಇಲ್ಲಿ ಕಸ ಹಾಕುವುದಕ್ಕೆ ತೀವ್ರ ವಿರೋಧವಿದೆ ಎಂಬ ಬರಹದ ಬ್ಯಾನರ್ ಹಾಕಲಾಗಿದೆ.