ಮರ್ಕಂಜದ ಮಿತ್ತಡ್ಕದ ಮೋಹನರವರ ಪತ್ನಿ ಶೋಭಾಲತಾ ಎಂಬವರು ಕಾಣೆಯಾದ ಹಿನ್ನೆಲೆಯಲ್ಲಿ ಬಾವಿಗೆ ಹಾರಿರಬಹುದೆಂಬ ಅನುಮಾನದಿಂದ ಬಾವಿಯನ್ನು ಅಗೆದು ನೋಡುವ ಕಾರ್ಯಚರಣೆ ನಿನ್ನೆಯಿಂದ ಆರಂಭವಾಗಿದ್ದು, ಇದೀಗ ಬಾವಿ ಅಗೆಯುವ ಕಾರ್ಯಚರಣೆ ಅಂತಿಮ ಹಂತಕ್ಕೆ ತಲುಪಿ ಬಾವಿಯೊಳಗೆ ಇದ್ದ ಮಣ್ಣು ತೆಗೆಯುವ ಕಾರ್ಯ ನಡೆದಿತ್ತು. ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದವರು ಸ್ಥಳದಲ್ಲಿದ್ದು, ಬಾವಿಯೊಳಗೆ ಇಳಿದು ಹುಡಕುವ ಕಾರ್ಯಚರಣೆ ಆರಂಭಿಸುತ್ತಿದ್ದಂತೆ ಬಾವಿಯ ಒಳಭಾಗದಲ್ಲಿ ಮತ್ತೆ ಕುಸಿತಗೊಂಡಿತು. ಹೀಗಾಗಿ ಮಣ್ಣು ತೆಗೆಯುವ ಕಾರ್ಯಚರಣೆ ಮತ್ತೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.