ಪ್ರಾಧ್ಯಾಪಕ ಕೌಶಿಕ್ ಚಿದ್ಗಲ್ ರವರು ಮಂಡಿಸಿದ “Modern Judicial Trend for Implementation of Human rights” ಈ ಮಹಾ ಪ್ರಬಂಧಕ್ಕೆ ಸನ್ ರೈಸ್ ರಾಜಸ್ಥಾನ್ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಡಾ. ಪವನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ “Modern Judicial Trend for Implementation of Human rights” ಈ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಿದ್ದಾರೆ.
ಕೌಶಿಕ್ ರವರು ಪ್ರಸ್ತುತ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಮೂಡಬಿದಿರೆ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಸ್ಟೂಡೆಂಟ್ ವೆಲ್ ಫೇರ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಈ ಹಿಂದೆ ಕೆವಿಜಿ ಕಾನೂನು ಮಹಾವಿದ್ಯಾಲಯ ಸುಳ್ಯ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಮತ್ತು ಪಟೇಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಬೆಂಗಳೂರು, ಶಾರದ ವಿಲಾಸ್ ಕಾನೂನು ಮಹಾವಿದ್ಯಾಲಯ ಮೈಸೂರು, ಸಿಎಂಆರ್ ಯುನಿವರ್ಸಿಟಿ ಬೆಂಗಳೂರು ಇಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಕೌಶಿಕ್ ರವರು ಏನೆಕಲ್ಲು ಗ್ರಾಮದ ಚಿದ್ಗಲ್ ಮನೆ ದಿ. ಹರಿಶ್ಚಂದ್ರ ಹಾಗೂ ನಿವೃತ್ತ ತಾಲೂಕು ವೈದ್ಯಾಧಿಕಾರಿ ಡಾ. ಭಾನುಮತಿ ಹರಿಶ್ಚಂದ್ರ ರವರ ಪುತ್ರ.
ಪತ್ನಿ ಕಾವ್ಯಶ್ರೀ ಕೌಶಿಕ್ ಚಿದ್ಗಲ್ ರವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ಮಹಾವಿದ್ಯಾಲಯದ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಗಳು ಲೌಕ್ಯ ಕೌಶಿಕ್ ಚಿದ್ಗಲ್.