ಪ್ರಣಾಮ್ ಶೆಟ್ಟಿ ಮೇನಾಲರಿಗೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ

0

ಈ ಸಾಲಿನ ರಾಜ್ಯ ಮಟ್ಟದಲ್ಲಿ ನಡೆದಿರುವ ಪಿಜಿ ಸಿಇಟಿ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ಅಜ್ಜಾವರ ಗ್ರಾಮದ ಮೇನಾಲ ಸುಭೋದ್ ಶೆಟ್ಟಿ – ಶ್ರೀಮತಿ ಶಿಲ್ಪಾ ದಂಪತಿಗಳ ಪುತ್ರ ಪ್ರಣಾಮ್ ಶೆಟ್ಟಿ ಮೇನಾಲ ರಾಜ್ಯದಲ್ಲಿ 8 ನೇ ರ್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ.

ರಾಜ್ಯದಲ್ಲಿ ಒಟ್ಟು 47436 ಮಂದಿ ಪ್ರವೇಶ ಪರೀಕ್ಷೆ ಬರೆದಿದ್ದು, ಅವರಲ್ಲಿ ಪ್ರಣಾಮ್ ಶೆಟ್ಟಿಯವರು 8 ಸ್ಥಾನ ಪಡೆದಿದ್ದಾರೆ.

ಇವರು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಲ್ಲಿ ಬಿ.ಕಾಂ ವಿದ್ಯಾಭ್ಯಾಸ ಪಡೆದಿದ್ದಾರೆ.